ಮಂಗಳೂರು ಏರ್‌ ಪೋರ್ಟ್ ‍ನಲ್ಲಿ 46.52 ಲಕ್ಷ ರೂ. ಮೌಲ್ಯದ ಚಿನ್ನ ವಶ

Prasthutha|

ಮಂಗಳೂರು: ಐದು ಪ್ರತ್ಯೇಕ ಪ್ರಕರಣಗಳಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಒಟ್ಟು 46.52 ಲಕ್ಷ ರೂ. ಮೌಲ್ಯದ ಚಿನ್ನವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

- Advertisement -

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೆ.23 ಮತ್ತು 24ರಂದು ಬೇರೆ ಬೇರೆ ಐದು ಪ್ರಕರಣದಲ್ಲಿ ದುಬೈನಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 24 ಕ್ಯಾರೆಟ್‌ ನ ಒಟ್ಟು 46,52,270 ರೂ ಮೌಲ್ಯದ 775 ಗ್ರಾಂ ಚಿನ್ನ ವನ್ನು ಪತ್ತೆಹಚ್ಚಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಚಿನ್ನವನ್ನು ಪೇಸ್ಟ್ ರೂಪದಲ್ಲಿ ಏರ್‌ ಪೋಡ್ಸ್ , ಒಳ ಉಡುಪು, ಮತ್ತು ಟ್ರಾಲಿಬ್ಯಾಗ್‌ನ ರಾಡ್‌ಗಳಲ್ಲಿ ಅಂಟಿಸಿ ಸಾಗಿಸುತ್ತಿದ್ದರು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp