ಸುರತ್ಕಲ್ ವೃತ್ತಕ್ಕೆ ವಿವಾದಿತ ವ್ಯಕ್ತಿ ಸಾವರ್ಕರ್ ನಾಮ ಅಳವಡಿಸುವ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ಕಾವೇರಿದ ಚರ್ಚೆ

Prasthutha|

►ವಿವಾದಿತನ ಹೆಸರು ಇಡದಂತೆ ಎಸ್ ಡಿ ಪಿ ಐ ಮತ್ತು ಕಾಂಗ್ರೆಸ್ ಸದಸ್ಯರ ಒತ್ತಾಯ

- Advertisement -

ಮಂಗಳೂರು: ಸುರತ್ಕಲ್ ವೃತ್ತಕ್ಕೆ ವಿವಾದಿತ ವ್ಯಕ್ತಿ ಸಾವರ್ಕರ್ ಹೆಸರು ಇಡಬೇಕೆಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ನೀಡಿದ ಮನವಿಯ ಬಗ್ಗೆ ಇಂದು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪರ-ವಿರೋಧವಾಗಿ ಕಾವೇರಿದ ಚರ್ಚೆ ನಡೆಯಿತು.

ಸಭೆಯ 181 ನೇ ಅಜೆಂಡಾವಾಗಿ ಈ ಬಗ್ಗೆ ಚರ್ಚೆ ಮಾಡಲು ಮಹಾನಗರ ಪಾಲಿಕೆ ಮೇಯರ್ ಸುದೀರ್ ಕುಮಾರ್ ಶೆಟ್ಟಿ ಅನುವುಮಾಡಿಕೊಟ್ಟರು‌.ಅದರಂತೆ ಬಿಜೆಪಿ ಸದಸ್ಯ ಅರುಣ್ ಚೌಟ ಮಾತನಾಡಿ ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರು ಇಡುವ ಬಗ್ಗೆ ಕೇವಲ 14 ಮಂದಿಯಿಂದ ಮಾತ್ರ ಆಪೇಕ್ಷಣೆ ಸಲ್ಲಿಕೆಯಾಗಿದೆ ಅದಲ್ಲದೇ ಹೆಸರು ಇಡುವ ಬಗ್ಗೆ ಪ್ರಸ್ತಾವನೆ ಸಲ್ಲಿಕೆ ಮಾಡಿರುವ ಶಾಸಕರಾದ ಮಾನ್ಯ ಭರತ್ ಶೆಟ್ಟಿಯವರು 20,000 ಗಿಂತಲೂ ಅಧಿಕ ಮತಗಳಿಂದ ವಿಜೇತರಾದವರು ಹಾಗೂ ಎಲ್ಲರ ಜೊತೆಗೂ ಹೊಂದಾಣಿಕೆ ಮಾಡಿಕೊಂಡು ಹೋಗುವ ಜನಪ್ರತಿನಿಧಿಯಾಗಿರುತ್ತಾರೆ.ಹಾಗಾಗಿ ಈ ಬಗ್ಗೆ ಈ ಸಭೆಯಲ್ಲಿ ವೃತ್ತಕ್ಕೆ ಸಾವರ್ಕರ್ ಹೆಸರು ಇಡುವಂತೆ ಇಲ್ಲಿ ನಿರ್ಣಯ ಅಂಗೀಕಾರ ಮಾಡಿ ಸರ್ಕಾರಕ್ಕೆ ಅನುಮೋದನೆ ನೀಡಲು ಪ್ರಸ್ತಾವನೆ ಸಲ್ಲಿಸುವ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು, ಆಗ ಇದಕ್ಕೆ ಎಸ್‌ಡಿಪಿಐಯ ಸಂಶಾದ್ ಅಬೂಬಕ್ಕರ್ ಮತ್ತು ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು.ಅರುಣ್ ಚೌಟ ಮಾತಿಗೆ ಪ್ರತಿಯಾಗಿ ಮಾತನಾಡಿದ ಕಾಂಗ್ರೆಸ್ ಸದಸ್ಯ ವಿನಯರಾಜ್ ಈಗಾಗಲೇ ಆಕ್ಷೇಪಣೆ ಸಲ್ಲಿಸಿರುವ 14 ರಲ್ಲಿ ಮೂರು ಪ್ರಮುಖ ಹಾಗೂ ಜನಸಂಖ್ಯ ಬಲವುಳ್ಳ ಸಂಘಟನೆಗಳಾಗಿದೆ.(ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಸುರತ್ಕಲ್, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಶ್ರೀನಿವಾಸ ಮಲ್ಯ ಚಾರಿಟಬಲ್ ಟ್ರಸ್ಟ್)
ಹಾಗಾಗಿ ಅದನ್ನು ಕೂಡ ನಾವು ಘಣನೆಗೆ ತೆಗೆದುಕೊಳ್ಳುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.ಹಾಗೂ ನಮ್ಮ ವಿರೋಧ ಶಾಸಕರಿಗಲ್ಲ ಬದಲಿಗೆ ಆ ವಿವಾದಿತ ಹೆಸರನ್ನು ಬದಲಾವಣೆ ಮಾಡಿ ಪರ್ಯಾಯವಾಗಿ ಕೆಲವೊಂದು ಹೆಸರನ್ನು ಸೂಚಿಸಿ ವಿವಾದಿತ ಇಲ್ಲದ ಇಂತಹ ಹೆಸರುಗಳನ್ನು ಇಡಿ ಎಂದು ಅಭಿಪ್ರಾಯ ಮಂಡನೆ ಮಾಡಿದರು. ಇದಕ್ಕೆ ಧ್ವನಿಗೂಡಿಸಿದ ಎಸ್‌ಡಿಪಿಐ ಸದಸ್ಯೆ ಶಂಶಾದ ಅಬೂಬಕ್ಕರ್ ಸುರತ್ಕಲ್ ಎಂಬುದು ಸೂಕ್ಷ್ಮ ಪ್ರದೇಶ ವಿವಾದಿತ ವ್ಯಕ್ತಿ ಸಾವರ್ಕರ್ ಹೆಸರು ಇಟ್ಟರೆ ವಿವಾದ ಮತ್ತಷ್ಟು ಉದ್ಭವ ಆಗಲಿದೆ,ಹಾಗಾಗಿ ಆ ಹೆಸರನ್ನು ಬದಲಾವಣೆ ಮಾಡಿ ಎಂದು ಒತ್ತಾಯಿಸಿದರು.
ಕೊನೆಗೆ ಮೇಯರ್ ಈ ಬಗ್ಗೆ ಮಾತನಾಡಿ ಇದನ್ನು ಮುಂದಿನ ಸ್ಥಾಯಿ ಸಮಿತಿ ಸಭೆಯಲ್ಲಿ ಪ್ರಸ್ತಾವನೆ ಮಾಡಿ ಆಕ್ಷೇಪಣೆ ಸಲ್ಲಿಸಿರುವ 16 ಮಂದಿಯೂ ಕೂಡ ಸ್ಥಾಯಿ ಸಮಿತಿಯ ಸಭಗೆ ಆಗಮಿಸಿ ಅಲ್ಲಿ ಚರ್ಚೆ ಮಾಡಿ ಅಂತಿಮ ನಿರ್ಣಯ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.
ಸಭೆಯ ಆರಂಭದಲ್ಲಿ ಶಾಸಕ ವೇದವ್ಯಾಸ್ ಕಾಮತ್ ಭಾಷಣ ಮಾಡಿ ಪ್ರಧಾನಿ ನರೇಂದ್ರ ಮೋದಿಯವರ ನೇತ್ರತ್ವದಲ್ಲಿ ಚಂದ್ರಯಾನ ಮಾಡಿರುವ ಬಗ್ಗೆ, ಜಿ20 ಸಭೆಯ ಯಶಸ್ವಿಯ ಬಗ್ಗೆ ಹಾಗೂ ಸ್ತ್ರೀಯರಿಗೆ 33% ಶೇಕಡಾ ಮೀಸಲಾತಿ ತಂದುದರ ಬಗ್ಗೆ ಭಾಷಣ ಮಾಡಿ ಧನ್ಯವಾದ ಸಮರ್ಪಿಸಿದರು. ಅವರ ಭಾಷಣದ ನಂತರ ಎಸ್‌ಡಿಪಿಐ ಸದಸ್ಯೆ ಶಾಸಕರಿಗೆ ಮನವಿ ನೀಡಿ ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದ ವರ್ಗ(OBC) ಪ್ರತ್ಯೇಕ ಒಳ ಮೀಸಲಾತಿ ನೀಡಬೇಕೆಂದು ಮನವಿ ಸಲ್ಲಿಸಿ ,ಈ ಮನವಿಯನ್ನು ನಮ್ಮ ಕಡೆಯಿಂದ ಕೇಂದ್ರ ಸರ್ಕಾರಕ್ಕೆ ತಲುಪಿಸಬೇಕೆಂದು ಒತ್ತಾಯಮಾಡಿದರು.
ಹಾಗು ಸಭೆಯಲ್ಲಿ ವಾಮಂಜೂರು ಅಣಬೆ ಫ್ಯಾಕ್ಟರಿ ಸ್ಥಳಾಂತರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.