ಮತ್ತೆ ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ: ಒಂದೇ ವಾರದಲ್ಲಿ 4.80ರೂ. ಏರಿಕೆ

Prasthutha|

ನವದೆಹಲಿ: ಪೆಟ್ರೋಲ್, ಡೀಸೆಲ್ ದರ ಸತತ 7ನೇ ದಿನವೂ ಏರಿಕೆಯಾಗಿದ್ದು, ಮಂಗಳವಾರವೂ ಪ್ರತಿ ಲೀಟರ್ ಪೆಟ್ರೋಲ್‍ ಗೆ 80 ಪೈಸೆ, ಡೀಸೆಲ್ 70 ಪೈಸೆ ಏರಿಕೆಯಾಗಿದೆ.

- Advertisement -

ಈ ಮೂಲಕ ಒಂದೇ ವಾರದಲ್ಲಿ ಪ್ರತಿ ಲೀಟರ್  ಪೆಟ್ರೋಲ್‌, ಡೀಸೆಲ್‌ ಬೆಲೆ  4.80ರೂ. ಏರಿಕೆಯಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 104.76 ರೂ. ಇದ್ದ ಪೆಟ್ರೋಲ್ ದರ 105.62 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ಲೀಟರ್‌ ಗೆ 89 ರೂ. ಇದ್ದ ಡೀಸೆಲ್ ದರ ರೂ. 89.70ಗೆ ಏರಿಕೆಯಾಗಿದೆ.

Join Whatsapp