ತರಕಾರಿ ಮಾರಾಟಗಾರನ ಬ್ಯಾಂಕ್ ಖಾತೆಗೆ ಬಿತ್ತು 172 ಕೋಟಿ: ಬೆಚ್ಚಿಬಿದ್ದ ಕುಟುಂಬಸ್ಥರು

Prasthutha|

ನವದೆಹಲಿ: ತರಕಾರಿ ಮಾರಾಟಗಾರನೊಬ್ಬನ ಬ್ಯಾಂಕ್ ಖಾತೆಗೆ 172 ಕೋಟಿ ರೂಪಾಯಿ ಬಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

- Advertisement -


ವಿಜಯ್ ರಸ್ತೋಗಿ ಅವರ ಬ್ಯಾಂಕ್ ಖಾತೆಗೆ ಹಣ ಬಿದ್ದಿದ್ದು, ಘಟನೆಯಿಂದಾಗಿ ಅವರ ಕುಟುಂಬವು ತೀವ್ರ ಒತ್ತಡದಲ್ಲಿದೆ.
ಬ್ಯಾಂಕ್ ಖಾತೆ ತನಗೆ ಸೇರಿದ್ದಲ್ಲ ಮತ್ತು ಖಾತೆಯನ್ನು ತೆರೆಯಲು ಯಾರಾದರೂ ತಮ್ಮ ಪ್ಯಾನ್ ಸಂಖ್ಯೆ ಮತ್ತು ಇತರ ವಿವರಗಳನ್ನು ಬಳಸಿರಬಹುದು. ನಮ್ಮ ಮನೆಗೆ ಆದಾಯ ತೆರಿಗೆ ಇಲಾಖೆ ಮತ್ತು ಪೊಲೀಸರು ಆಗಾಗ ಭೇಟಿ ನೀಡುತ್ತಿದ್ದಾರೆ ಎಂದು ರಸ್ತೋಗಿ ಹೇಳಿದ್ದಾರೆ.


ರಸ್ತೋಗಿ ಅವರ ಖಾತೆಗೆ ಇಷ್ಟು ದೊಡ್ಡ ಮೊತ್ತ ಹೇಗೆ ಜಮೆಯಾಗಿದೆ ಎಂಬುದನ್ನು ಪರಿಶೀಲಿಸಲು ಐಟಿ ಇಲಾಖೆ ಡಿಜಿಟಲ್ ಹಣ ವರ್ಗಾವಣೆ ಏಜೆನ್ಸಿಯನ್ನು ತನಿಖೆ ನಡೆಸುತ್ತಿದೆ. ಖಾತೆ ತನಗೆ ಸೇರಿದ್ದಲ್ಲ ಎಂಬ ರಸ್ತೋಗಿ ಹೇಳಿಕೆಯನ್ನೂ ಇಲಾಖೆ ಪರಿಶೀಲಿಸುತ್ತಿದೆ. ಒಂದು ತಿಂಗಳ ಹಿಂದೆ ಐಟಿ ಅಧಿಕಾರಿಗಳು ರಸ್ತೋಗಿ ಅವರ ಹೆಸರು ಸೇರಿದಂತೆ ಅಕ್ರಮ ಹಣ ವರ್ಗಾವಣೆಯ ಪಟ್ಟಿಯನ್ನು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸೈಬರ್ ಕ್ರೈಂ ಸೆಸ್’ಗೆ ವರ್ಗಾಯಿಸಲಾಗಿದೆ.

Join Whatsapp