ಸೌದಿಯ ಅಲ್-ನಸ್ರ್ ಫುಟ್ ಬಾಲ್ ಕ್ಲಬ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ರೊನಾಲ್ಡೊ

Prasthutha|

ನವದೆಹಲಿ: ಪೋರ್ಚುಗಲ್ ಫುಟ್ಬಾಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ, ಸೌದಿ ಅರೇಬಿಯಾದ ಅಲ್ ನಾಸರ್ ಫುಟ್’ಬಾಲ್ ಕ್ಲಬ್’ನೊಂದಿಗೆ ದಾಖಲೆ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

- Advertisement -

ಈಗಾಗಲೇ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ತೊರೆದಿರುವ 37 ವರ್ಷದ ರೊನಾಲ್ಡೊ ಎರಡೂವರೆ ವರ್ಷಗಳ ಅವಧಿಗೆ ಸೌದಿ ಅರೇಬಿಯಾದ ಅಲ್-ನಸ್ರ್ ಕ್ಲಬ್ ಪರ ಆಡಲಿದ್ದಾರೆ.

ರೊನಾಲ್ಡೊ ಅವರೊಂದಿಗೆ 2025 ಜೂನ್’ವರೆಗೆ ಅಂದಾಜು ₹1,770 ಕೋಟಿ ಮೊತ್ತಕ್ಕೆ (200 ಮಿಲಿಯನ್ ಯುರೋ) ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

- Advertisement -

 ಈ ಬಗ್ಗೆ ಸ್ಟಾರ್ ಆಟಗಾರನಿಗೆ ಸ್ವಾಗತ ಕೋರಿ ಪ್ರತಿಕ್ರಿಯಿಸಿರುವ ಅಲ್ ನಸ್ರ್ ಕ್ಲಬ್, ಇತಿಹಾಸ ರಚನೆಯಾಗಿದೆ. ನಮ್ಮ ಕ್ಲಬ್ ಇನ್ನಷ್ಟು ಯಶಸ್ಸನ್ನು ಸಾಧಿಸಲು ಮತ್ತು ಭವಿಷ್ಯದ ಪೀಳಿಗೆಯ ಆಟಗಾರರಿಗೆ ಸ್ಪೂರ್ತಿಯಾಗಲು ರೊನಾಲ್ಡೊ ಅವರೊಂದಿಗಿನ ಒಪ್ಪಂದ ನೆರವಾಗಲಿದೆ ಎಂದು ರೊನಾಲ್ಡೊ ಅವರ ನೆಚ್ಚಿನ ಏಳು ನಂಬರ್ ಜೆರ್ಸಿಯನ್ನು ಹಿಡಿದಿರುವ ಚಿತ್ರವನ್ನು ಅಭಿಮಾನಿಗಳಿಗಾಗಿ ಟ್ವೀಟ್’ನಲ್ಲಿ ಹಂಚಿಕೊಂಡಿದೆ.

Join Whatsapp