ಸಾಮಾಜಿಕ ಕಾರ್ಯಕರ್ತ ರೋನಾ ವಿಲ್ಸನ್‌ರ ಸ್ಮಾರ್ಟ್ ಫೋನ್ 49 ಬಾರಿ ಪೆಗಾಸೆಸ್ ನಿಂದ ಹ್ಯಾಕ್!

Prasthutha|

ಹೊಸದಿಲ್ಲಿ: ಎಲ್ಗರ್ ಪರಿಷತ್ ಪ್ರಕರಣದಲ್ಲಿ ಬಂಧನಕ್ಕೊಳಗಾಗುವ ಒಂದು ವರ್ಷದ ಮೊದಲು ಮಾನವ ಹಕ್ಕುಗಳ ಕಾರ್ಯಕರ್ತ ರೋನಾ ವಿಲ್ಸನ್ ಅವರ ಸ್ಮಾರ್ಟ್‌ಫೋನ್ ಪೆಗಾಸಸ್ ಸ್ಪೈ ಸಾಫ್ಟ್‌ವೇರ್ ಬಳಸಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ.

- Advertisement -

2018 ರಲ್ಲಿ ಅವರನ್ನು ಬಂಧಿಸುವ ಮೊದಲು ಪೆಗಾಸಸ್ ಸ್ಪೈವೇರ್‌ ನಿಂದ ಹ್ಯಾಕ್ ಮಾಡಲಾಗಿತ್ತು ಎಂದು ಅಮೆರಿಕ ಮೂಲದ ಡೇಟಾ ಫೋರೆನ್ಸಿಕ್ ಏಜನ್ಸಿ ಆರ್ಸೆನಲ್ ಕನ್ಸಲ್ಟಿಂಗ್ ಬಹಿರಂಗಪಡಿಸಿದೆ.

ರೋನಾ ವಿಲ್ಸನ್ ಅವರ ಸೆಲ್ ಫೋನ್ ಅನ್ನು ಪೆಗಾಸಸ್ ಸ್ಪೈವೇರ್ 49 ಬಾರಿ ಹ್ಯಾಕ್ ಮಾಡಿದೆ. ಜುಲೈ 5, 2017 ಮತ್ತು ಏಪ್ರಿಲ್ 10, 2018 ರ ನಡುವೆ ವಿಲ್ಸನ್ ಅವರ ಐಫೋನ್‌ ಗೆ ಪೆಗಾಸಸ್ 49 ಬಾರಿ ವಿಭಿನ್ನ ರೀತಿಯಲ್ಲಿ ದಾಳಿ ಮಾಡಿದೆ ಎಂದು ಎಂದು ವರದಿ ಹೇಳುತ್ತದೆ.

Join Whatsapp