ರೋಹಿಣಿ ಕೋರ್ಟ್ ಸ್ಫೋಟ ಪ್ರಕರಣ: ಡಿ.ಆರ್.ಡಿ.ಒ. ವಿಜ್ಞಾನಿ ಬಂಧನ
Prasthutha: December 18, 2021

ನವದೆಹಲಿ: ಇತ್ತೀಚೆಗೆ ನಡೆದ ದೆಹಲಿಯ ರೋಹಿಣಿ ನ್ಯಾಯಾಲಯ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಡಿ.ಆರ್.ಡಿ.ಒ ವಿಜ್ಞಾನಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತ ಆರೋಪಿಯನ್ನು ಭರತ್ ಭೂಷಣ್ ಕಟಾರಿಯಾ ಎಂದು ಗುರುತಿಸಲಾಗಿದೆ.
ಡಿಸೆಂಬರ್ 9 ರಂದು ದೆಹಲಿಯ ರೋಹಣಿ ಕೋರ್ಟ್ ಆವರಣದಲ್ಲಿ ನಡೆದ ಸ್ಫೋಟದಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದನು.
ಈ ನಡುವೆ ಕಟಾರಿಯಾ ಅವರು ಟಿಫಿನ್ ಬಾಕ್ಸ್ ನಲ್ಲಿ ಸ್ಫೋಟಕವನ್ನು ಇಟ್ಟು ತನ್ನ ನೆರೆಮನೆಯ ವಕೀಲರೊಬ್ಬರನ್ನು ಕೊಲ್ಲಲು ಯೋಜನೆ ರೂಪಿಸಿರುವ ಕುರಿತು ವಿಚಾರಣೆಯ ಬಾಯ್ಬಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರ ನಡುವೆ ವಿವಾದವಿದ್ದು” ಪರಸ್ಪರ ದೂರು ಪ್ರತಿದೂರು ದಾಖಲಿಸಿಕೊಂಡಿದ್ದರು ಎಂದು ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನ ತಿಳಿಸಿದ್ದಾರೆ.
