ರಾಕ್‌ಲೈನ್ ವೆಂಕಟೇಶ್ ಸಹೋದರ ಮನೆಗೆ ಕನ್ನ: ನೇಪಾಳಿ ಗ್ಯಾಂಗ್ ಸೆರೆ

Prasthutha|

ಬೆಂಗಳೂರು: ಚಲನಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಹೋದರ ಹಾಗೂ ಉದ್ಯಮಿ ಟಿ.ಎನ್. ಭ್ರಮರೇಶ್ ಮನೆಗೆ ಕನ್ನ ಹಾಕಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಗ್ಯಾಂಗನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಮೂವರು ಮಹಿಳೆಯರು ಸೇರಿದ ನೇಪಾಳ ಗ್ಯಾಂಗ್ ಆನ್ನು ಮಹಾಲಕ್ಷ್ಮೀಲೇಔಟ್ ಪೊಲೀಸರು ಬಂಧಿಸಿದ್ದಾರೆ.

- Advertisement -

ಬಂಧಿತರಿಂದ 1.5 ಕೋಟಿ ರೂ. ಮೌಲ್ಯದ 3.10 ಕೆಜಿ ಚಿನ್ನಾಭರಣ, 40 ಸಾವಿರ ರೂ. ಮೌಲ್ಯದ 562 ಗ್ರಾಂ ಬೆಳ್ಳಿ ಹಾಗೂ 2 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 16 ವಾಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ನೇಪಾಳ ಮೂಲದ ಉಪೇಂದ್ರ ಬಹದ್ದೂರ್ ಶಾಹಿ ಅಲಿಯಾಸ್ ಭೂಪೇಂದ್ರ ಪ್ರದೀಪ್ ಶಾಹಿ, ನಾರ ಬಹದ್ದೂರ್ ಶಾಹಿ ಅಲಿಯಾಸ್ ನಬೀನ್, ಖಾಕೇಂದ್ರ ಬಹದ್ದೂರ್ ಅಲಿಯಾಸ್ ಶಾಹಿ ಖಕೇಂದರ್, ಕೋಮಲ್ ಶಾಹಿ, ಸ್ವಸ್ತಿಕ್ ಶಾಹಿ, ಪಾರ್ವತಿ ಶಾಹಿ ಮತ್ತು ಶಾದಲ ಶಾಹಿ ಬಂಧಿತರು. ತಲೆಮರೆಸಿಕೊಂಡಿರುವ ಬಸಂತ್ ಶಾಹಿ, ಬಿಮ್ ಬಿರಶಾಹಿ, ಯಶೋಧ ಪತ್ತೆಗೆ ಬಲೆಬೀಸಲಾಗಿದೆ.

- Advertisement -

ಎನ್. ಭ್ರಮರೇಶ್ ಕುಟುಂಬ ಸಮೇತ ಗ್ರೀಸ್ ಪ್ರವಾಸಕ್ಕೆ ತೆರಳಿದ್ದಾಗ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ತನಿಖೆ ನಡೆಸಿದ ಇನ್‌ಸ್ಪೆಕ್ಟರ್‌ಎಚ್.ಮಂಜು ನೇತೃತ್ವದ ತಂಡ ನೆರೆಹೊರೆಯವರನ್ನು ವಿಚಾರಿಸಿದಾಗ ಕೃತ್ಯದ ಬಳಿಕ ಪಕ್ಕದ ಕಟ್ಟಡದಲ್ಲಿದ್ದ ನೇಪಾಳದ ಐವರು ಸೆಕ್ಯೂರಿಟಿ ಗಾರ್ಡ್‌ಗಳು ನಾಪತ್ತೆ ಆಗಿರುವ ಸಂಗತಿ ಗೊತ್ತಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಆರೋಪಿಗಳು ಕೆಲ ವರ್ಷಗಳ ಹಿಂದೆ ನೌಕರಿ ಅರಸಿ ನೇಪಾಳದಿಂದ ಬೆಂಗಳೂರಿಗೆ ಬಂದಿದ್ದರು. ನಗರದ ವಿವಿಧೆಡೆ ಸೆಕ್ಯೂರಿಟಿ ಗಾರ್ಡ್‌ಗಳಾಗಿದ್ದರು. ಭ್ರಮರೇಶ್ ಶ್ರೀಮಂತಿಕೆ ತಿಳಿದು ಕನ್ನ ಹಾಕಲು ನಿರ್ಧರಿಸಿದ್ದರು. 4 ತಿಂಗಳಿಂದ ಹೊಂಚು ಹಾಕಿ ಅ.21ರಂದು ಭ್ರಮರೇಶ್ ಕುಟುಂಬ ಪ್ರವಾಸಕ್ಕೆ ತೆರಳಿರುವ ಸಂಗತಿ ಕಲೆ ಹಾಕಿ 4 ಅಂತಸ್ತಿನ ಮನೆಗೆ ಏಣಿ ಹಾಕಿಕೊಂಡು ಮಹಡಿಗೆ ತೆರಳಿ ಅಲ್ಲಿ ಕೋಣೆಯ ಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿದ್ದರು. ಲಾಕರ್‌ನಲ್ಲಿದ್ದ 5.5 ಕೆಜಿ ಚಿನ್ನಾಭರಣ, ವಿವಿಧ ಕಂಪನಿಯ ವಾಚ್‌ಗಳು, 6.10 ಲಕ್ಷ ರೂ. ನಗದು ದೋಚಿದ್ದರು.

Join Whatsapp