ತಾಯಿಫ್: ಅಲ್ ಹದಾ ಪರ್ವತದಿಂದ ಕಾರಿನ ಮೇಲೆ ಅಪ್ಪಳಿಸಿದ ಬೃಹತ್ ಬಂಡೆ

Prasthutha|

ತಾಯಿಫ್: ಮಕ್ಕಾ-ತಾಯಿಫ್ ದಾರಿಯಲ್ಲಿ ಅಲ್ ಹದಾ ಪರ್ವತದಿಂದ (ಜಬಲ್ ಅಲ್ ಹದಾ) ಬೃಹತ್ ಗಾತ್ರದ ಬಂಡೆ ಕಲ್ಲೊಂದು ಉರುಳಿ ವಾಹನವೊಂದರ ಮೇಲೆ ಬಿದ್ದಿರುವ ವೀಡಿಯೊ ಕ್ಲಿಪ್ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಲ್ಲು ಪರ್ವತದ ತುದಿಯಿಂದ ಉರುಳಿ ಬಂದು ಕಾರಿನ ಮೇಲೆ ನಿಂತಿದ್ದು, ಚಾಲಕ ಯಾವುದೇ ಗಾಯಗಳಿಲ್ಲದೆ ಹೊರಗಡೆ ನಿಂತಿರುವ ಚಿತ್ರ ವೀಡಿಯೊದಲ್ಲಿ ಕಾಣುತ್ತದೆ.

- Advertisement -

ತಾಯಿಫ್ ನಲ್ಲಿ ಇಂದು ಮಧ್ಯಮ ಮಟ್ಟದಲ್ಲಿ ಮಳೆಯಾಗಿರುವುದು ವರದಿಯಾಗಿದೆ.

- Advertisement -