ಸಂಬಂಧಿ ಎಂದು ನಂಬಿಸಿ ಸಾವಿನ ಮನೆಯಿಂದ ಹಣ ದರೋಡೆ

Prasthutha|

ಕೋಟ್ಟಯಂ: ಸಂಬಂಧಿಕನೆಂದು ನಂಬಿಸಿ ಮೃತ ವ್ಯಕ್ತಿಯ ಮನೆಯಿಂದ  ಹಣ ಎಗರಿಸಿದ  ಘಟನೆ  ಕೊದನೆಲ್ಲೂರು ಎಂಬಲ್ಲಿ ನಡೆದಿದೆ. ಕಳ್ಳನು ಪ್ಲಾಕುಝಿಯಲ್ಲಿರುವ ಬೇಬಿಯ ಮನೆಯಿಂದ 31,000 ರೂ.ಗಳನ್ನು ಕದ್ದಿದ್ದಾನೆ. ಬೇಬಿಯ ತಾಯಿ ಮೇರಿಯ ಅಂತ್ಯಸಂಸ್ಕಾರದ ವೇಳೆ ಈ ಕಳ್ಳತನ ನಡೆದಿದೆ.

- Advertisement -

ಕಳ್ಳನು ಮನೆಗೆ ತಲುಪಿದಾಗ, ನೆರೆಹೊರೆಯ ಮಹಿಳೆ ಮತ್ತು ಮೈಕ್ ಆಪರೇಟರ್ ಮಾತ್ರ ಅಲ್ಲಿದ್ದರು. ನಂತರ ಅವರು, ಸಂಬಂಧಿಕರಂತೆ, ಮೈಕ್ ಸೆಟ್ಟರ್ ಗೆ ಸಹಾಯ ಮಾಡಿ, ಯಾರೂ ತಿಳಿಯದಂತೆ  ಮನೆಯೊಳಗೆ ಹೋಗಿ ಹಣವನ್ನು ಎಗರಿಸಿ ಮನೆಯ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾನೆ.

ಅಂತ್ಯಸಂಸ್ಕಾರದ ಮುಗಿದು ಬೇಬಿ ಹಾಗೂ ಮನೆಯವರು ಚರ್ಚ್ ನಿಂದ ಹಿಂದಿರುಗಿದಾಗ ಕಳ್ಳತನದ ಬಗ್ಗೆ ಅರಿವಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿಯು ಎರ್ನಾಕುಲಂ ನತ್ತ ಕಾಲ್ಕಿತ್ತಿದ್ದಾನೆ ಎಂದು ಪೋಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

Join Whatsapp