ಶೈಕ್ಷಣಿಕ ಕಾರ್ಯಾಗಾರದಲ್ಲಿ ಸಂಘಪರಿವಾರದ ದಾಂಧಲೆ, ಪೊಲೀಸ್ ಇಲಾಖೆಯ ಮುಂದುವರಿದ ಕೋಮುವಾದಿ ನಿಲುವು ಖಂಡನಾರ್ಹ: ರಿಯಾಝ್ ಫರಂಗಿಪೇಟೆ

Prasthutha|

- Advertisement -

ಮಂಗಳೂರು: ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ನಸ್ರುತುಲ್ ಇಸ್ಲಾಮಿಕ್ ಯಂಗ್’ಮೆನ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರದಲ್ಲಿ ದಾಂಧಲೆ ನಡೆಸಿದ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ತಿಳಿಸಿದ್ದಾರೆ.

ಮಾತ್ರವಲ್ಲ ಶಿಕ್ಷಣದಲ್ಲಿ ಗುಣಮಟ್ಟದ ಕಲಿಕೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮ ಆಯೋಜಿಸಿದ ಶಾಲಾ ಆಡಳಿತ ಮಂಡಳಿಯ ವಿರುದ್ಧ ಪ್ರಕರಣ ದಾಖಲಿಸಿದ ಪೋಲೀಸ್ ಇಲಾಖೆಯ ನಡೆ ತುಂಬಾ ಖೇದಕರ ಎಂದು ಅವರು ತಿಳಿಸಿದರು.

- Advertisement -

ಕೆಲವೊಂದು ಪೊಲೀಸ್ ಅಧಿಕಾರಿಗಳಲ್ಲಿರುವ ಕೋಮುವಾದಿ ಮನಸ್ಥಿತಿಯು ಈ ನಡೆಯ ಮೂಲಕ ಅನಾವರಣವಾಗಿದೆಯೆಂದು ತಿಳಿಸಿದರು.

ಘಟನೆಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ನಿಷ್ಪಕ್ಷಾತವಾಗಿ ತನಿಖೆ ನಡೆಸಿ ಖಾನುನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ನುಸ್ರುತುಲ್ ಇಸ್ಲಾಮಿಕ್ ಯಂಗ್’ಮೆನ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೈಸ್ಕೂಲ್’ನ ಹಿಂದೂ ವಿದ್ಯಾರ್ಥಿಗಳಿಗೆ ಇಸ್ಲಾಮ್ ಮತಪ್ರಭಾಷಣ ಕೇಳಲು ಬಲವಂತಪಡಿಸಲಾಗುತ್ತಿದೆ ಎಂದು ಸುಳ್ಳಾರೋಪ ಹೊರಿಸಿ ದಾಳಿ ನಡೆಸಿದ ಸಂಘಪರಿವಾರದ ಕಾರ್ಯಕರ್ತರು ದಾಂಧಲೆ ನಡೆಸಿದ್ದರು. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಘಟನೆಯ ಕುರಿತು ಪ್ರತಿಕ್ರಿಯಿಸಿದ ರಿಯಾಝ್ ಫರಂಗಿಪೇಟೆ, ಚುನಾವಣೆ ಸಮೀಪಿಸುತ್ತಿದ್ದಂತೆ ಸಮಾಜಘಾತುಕ ಶಕ್ತಿಗಳು ಸಮಾಜದಲ್ಲಿ ಶಾಂತಿ ಕದಡುವ ಪ್ರಸಂಗ ಸರ್ವೇಸಾಮಾನ್ಯವಾಗಿದೆ. ಅಭಿವೃದ್ಧಿ ಕಾರ್ಯದಲ್ಲಿ ಯಾವುದೇ ಕೊಡುಗೆಯನ್ನು ನೀಡದ ಬಿಜೆಪಿ ಮತ್ತು ಸಂಘಪರಿವಾರ ಭಾವನಾತ್ಮಕ ವಿಚಾರದಲ್ಲಿ ಜನರನ್ನು ಪ್ರಚೋದಿಸಿ, ಕೋಮು ಆಧಾರದಲ್ಲಿ ಮತ ಧ್ರುವೀಕರಣ ಮಾಡುವ ಮೂಲಕ ವೋಟ್ ಗಳಿಸುವ ಯೋಜನೆ ರೂಪಿಸುತ್ತಿದೆ ಎಂದು ತಿಳಿಸಿದರು.

ರಫೀಕ್ ಮಾಸ್ಟರ್ ಎಂಬ ಖ್ಯಾತ ಸಾಮಾಜಿಕ ಮುಂದಾಳು ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಇದನ್ನು ಸಹಿಸದ ವಿಭಜನಕಾರಿ ಶಕ್ತಿಗಳು ಇಂತಹ ಸಮಾಜಘಾತುಕ ಕೃತ್ಯಕ್ಕೆ ಮುಂದಾಗಿದೆ. ಹಿಂದುತ್ವ ಸಂಘಟನೆಗಳು ತನ್ನ ಸಮುದಾಯಕ್ಕೆ ಶೈಕ್ಷಣಿಕವಾಗಿ ಅಥವಾ ಆರ್ಥಿಕ ಸಬಲೀಕರಣಕ್ಕೆ ಸ್ಪಂದಿಸದೆ ಇತರ ಸಮುದಾಯದ ಸಂಘಟನೆಗಳು ಹಾಗೂ ನಾಯಕರು ಸಮಾಜದ ಏಳಿಗೆಗಾಗಿ ದುಡಿಯುವುದನ್ನು ಸಹಿಸದೆ ಸಮಾಜದದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದೆ. ಸಮಾಜಮುಖಿ ಮತ್ತು ಆರೋಗ್ಯ ಕಾರ್ಯಕ್ರಮಕ್ಕೆ ಸೇವೆಗೆ ಮುಂದಾಗದ ಸಂಘಪರಿವಾರ ಚುನಾವಣೆಯ ಗಿಮಿಕ್’ನ ಉದ್ದೇಶದಿಂದ ಸಂಘಪರಿವಾರ ಇಂತಹ ಸಮಾಜವಿರೋಧಿ ಕೃತ್ಯಕ್ಕೆ ಮುನ್ನುಡಿ ಬರೆದಿದೆ. ಇದರ ವಾಸ್ತವನ್ನು ಹಿಂದೂ ಸಮಾಜ ಅರ್ಥೈಸಿಕೊಂಡು ಸಮಾಜವಿರೋಧಿಗಳ ಸೆಟೆದು ನಿಲ್ಲುವಂತೆ ರಿಯಾಝ್ ಫರಂಗಿಪೇಟೆ ಮನವಿ ಮಾಡಿದರು.

ಇದರ ಮುಂದುವರಿದ ಭಾಗವೇ ಅಡ್ಯನಡ್ಕ ಘಟನೆಯಾಗಿದ್ದು, ಇದನ್ನು ಎಸ್.ಡಿ.ಪಿ.ಐ ಕಟುಶಬ್ದಗಳಿಂದ ಖಂಡಿಸುತ್ತದೆ ಎಂದು ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.

Join Whatsapp