ವ್ಯಾಪಕವಾಗುತ್ತಿರುವ ಪೊಲೀಸ್ ಚಿತ್ರಹಿಂಸೆ ಮತ್ತು ಕಸ್ಟಡಿ ಸಾವು : ಅಲ್ಪಸಂಖ್ಯಾತ ಮತ್ತು ದಲಿತರು ಪ್ರಕರಣದ ಪ್ರಮುಖ ಬಲಿಪಶುಗಳು !

Prasthutha|

ನವದೆಹಲಿ: ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಬಹಿರಂಗಗೊಳಿಸಿರುವ ಪೊಲೀಸ್ ಚಿತ್ರಹಿಂಸೆ ಮತ್ತು ಕಸ್ಟಡಿ ಮರಣಗಳ ಕುಗಿತಾದ ಅಂಕಿ ಅಂಶಗಳ ಬಗ್ಗೆ ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿರುವ ಮಾನವ ಹಕ್ಕುಗಳ ಸಂಸ್ಥೆಯಾದ ಎನ್.ಸಿ.ಎಚ್.ಆರ್.ಒ. ಜನರ ಹಕ್ಕುಗಳನ್ನು ರಕ್ಷಿಸಬೇಕಾದ ಕಾನೂನನ್ನು ದೇಶದಲ್ಲಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆಯೆಂದು ಆರೋಪಿಸಿದೆ. ಕಾಂಗ್ರೆಸ್ ಸಂಸದರು ಸಂಸತ್ತಿನಲ್ಲಿ ಮಾತನಾಡಿ ಭಾರತದಲ್ಲಿ ಕಸ್ಟಡಿ ಮರಣ ಮತ್ತು ಚಿತ್ರಹಿಂಸೆ ಪ್ರಕರಣ ವ್ಯಾಪಕವಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತ್ಯುತ್ತರ ನೀಡಿದ ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ ರಾಜ್ಯಖಾತೆ ಸಚಿವ ನಿತ್ಯಾನಂದ ರೈ ರಾಷ್ಟ್ರೀಯ ಮಾನವ ಹಕ್ಕುಗಳ ಅಂಕಿ ಅಂಶಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಆದರೆ ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಪೊಲೀಸ್ ಹಿಂಸಾಚಾರದ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಒತ್ತಾಯಿಸಿದಾಗ ಸಚಿವರು ಪ್ರತಿಕ್ರಿಯೆ ನೀಡದೇ ನುಣುಚಿಕೊಂಡರು.

- Advertisement -

ಪೊಲೀಸ್ ಕಸ್ಟಡಿಯಲ್ಲಿನ ಚಿತ್ರಹಿಂಸೆ ಮತ್ತು ಸಾವುಗಳ ಬಗ್ಗೆ ಬೆಳಕಿಗೆ ಬಂದಿರುವ ಅಂಕಿಅಂಶಗಳು ತೀವ್ರ ಕಳವಳಕಾರಿಯಾಗಿದೆ. ಮಾನವ ಹಕ್ಕುಗಳ ಸಂಘಟನೆಯಾದ ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳ ಒಕ್ಕೂಟ (NCHRO) ಸ್ವತಃ ಪೊಲೀಸ್ ದೌರ್ಜನ್ಯಗಳ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಲ್ಲಿ ಹಲವು ದೂರುಗಳನ್ನು ಸಲ್ಲಿಸಿದೆ. ಕಳೆದ ಕೆಲವು ವರ್ಷಗಳಿಂದ ವಿಚಾರಣೆಯ ನೆಪದಲ್ಲಿ ಜನರನ್ನು ಹಿಂಸಿಸುವುದು, ದೌರ್ಜನ್ಯವೆಸಗುವುದು ಮತ್ತು ಪೊಲೀಸ್ ಕಸ್ಟಡಿಯಲ್ಲಿ ಕೊಲ್ಲುವುದು ಭಾರತದಲ್ಲಿ ವ್ಯಾಪಕವಾಗುತ್ತಿರುವುದು ಖೇದಕರ ಬೆಳವಣಿಗೆಯೆಂದು ಎನ್.ಸಿ.ಎಚ್.ಆರ್.ಒ ತಿಳಿಸಿದೆ.

ಪೊಲೀಸ್ ಕಸ್ಟಡಿಯಲ್ಲಿನ ಮರಣಗಳ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು ಇಂತಹ ದೌರ್ಜನ್ಯವನ್ನು ತಡೆಗಟ್ಟುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆಯೆಂದು ತಿಳಿಸಿರುವುದು ಖೇದಕರ. ವಾಸ್ತವದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅತ್ಯಧಿಕ ಪೊಲೀಸ್ ಹಿಂಸೆ, ಕಸ್ಟಡಿ ಮರಣಗಳು ದಾಖಲಾಗಿದೆ. ಮಾತ್ರವಲ್ಲದೇ ಎನ್.ಸಿ.ಎಚ್.ಆರ್.ಒ ಸಂಘಟನೆಯು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಹೆಚ್ಚಿನ ಪೊಲೀಸ್ ಹಿಂಸಾಚಾರದ ಬಗ್ಗೆ ದೂರುಗಳನ್ನು ದಾಖಲಿಸಿದೆ. ಆದಾಗ್ಯೂ ಪೊಲೀಸ್ ದೌರ್ಜನ್ಯವನ್ನು ಬೇರೆ ರಾಜ್ಯದಲ್ಲಿಯೂ ಸಹಿಸಲು ಸಾಧ್ಯವಿಲ್ಲ ಮತ್ತು ಈ ದೌರ್ಜನ್ಯದ ವಿರುದ್ಧ ಕಾನೂನು ಹೋರಾಟ ನಡೆಸಲಿದೆಯೆಂದು ಎನ್.ಸಿ.ಎಚ್.ಆರ್.ಒ. ತಿಳಿಸಿದೆ.

Join Whatsapp