ಜಾಹೀರಾತಿನಲ್ಲಿ ಬಿಂದಿ ಧರಿಸಲಿಲ್ಲ ಎಂದು ಕರೀನಾ ಕಪೂರ್ ರನ್ನು ಟ್ರೋಲ್ ಮಾಡಿದ ಬಲಪಂಥೀಯರು

Prasthutha|

- Advertisement -

ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಪ್ರತಿಯೊಂದಕ್ಕೂ ಬಹಿಷ್ಕಾರದ ಕರೆಗಳು ಕೇಳಿಬರುತ್ತಿವೆ. ಬಹುಶಃ ಇದು ಬಹಿಷ್ಕಾರಗಳ ಕಾಲವಾಗಿದೆಯೋ ಏನೋ ಎಂದು ತೋರುತ್ತದೆ. ತನಿಷ್ಕ್, ಬರ್ಗರ್ ಕಿಂಗ್, ಕೆಎಫ್‌ಸಿ, ಹ್ಯುಂಡೈ ನಂತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಿಷ್ಕಾರಕ್ಕೊಳಗಾಗಿದ್ದು ಮಲಬಾರ್ ಗೋಲ್ಡ್.

ಹಣೆಯ ಮೇಲೆ ಬಿಂದಿ ಇಲ್ಲದೆ ನಟಿ ಕರೀನಾ ಕಪೂರ್ ಖಾನ್ ಕಾಣಿಸಿಕೊಂಡಿರುವ ಜಾಹೀರಾತಿಗಾಗಿ ಆಭರಣ ಗುಂಪನ್ನು ಟ್ರೋಲ್ ಮಾಡಲಾಗುತ್ತಿದೆ. ಈ ಜಾಹೀರಾತನ್ನು ಅಕ್ಷಯ ತೃತೀಯಕ್ಕಾಗಿ ಮಾಡಲಾಗಿದೆ. ಇದು ಹಿಂದೂಗಳಲ್ಲಿ ಚಿನ್ನದ ಖರೀದಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ. ಜಾಹೀರಾತಿನಲ್ಲಿ, ಕರೀನಾ ಗುಲಾಬಿ ಬಣ್ಣದ ಲೆಹಂಗಾವನ್ನು ಧರಿಸಿ, ವಿಸ್ತಾರವಾದ ಡೈಮಂಡ್ ನೆಕ್‌ಪೀಸ್, ಕಿವಿಯೋಲೆಗಳು ಮತ್ತು ಮಾಂಗ್ ಟಿಕಾದೊಂದಿಗೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಆಕೆಯ ಹಣೆಯ ಮೇಲೆ ಬಿಂದಿ ಇಲ್ಲವೆಂದು ಬಲಪಂಥೀಯರು ಟ್ರೋಲ್ ಮಾಡಿದ್ದಾರೆ.

- Advertisement -

ಕೆಲವರು ಈ ಜಾಹೀರಾತಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದು ಹಿಂದೂ ಸಂಪ್ರದಾಯಗಳು ಮತ್ತು ಹಬ್ಬಗಳನ್ನು ಕಡೆಗಣಿಸುವ ಪ್ರಯತ್ನ ಎಂದು ಕರೆದಿದ್ದಾರೆ. ಹಣೆಯ ಮೇಲೆ ಬಿಂದಿಯನ್ನು ಧರಿಸುವುದು ಮಹಿಳೆಯರಿಗೆ, ವಿಶೇಷವಾಗಿ ವಿವಾಹಿತರಿಗೆ ಸಾಂಪ್ರದಾಯಿಕ ಭಾರತೀಯ ಉಡುಪಿನ ಪ್ರಮುಖ ಅಂಶವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

Join Whatsapp