ಬಿಜೆಪಿ ತನಗೆ ಬೇಕಾದವರನ್ನೇ ಪಿಎಸ್ ಐ ಹುದ್ದೆಗೆ ನೇಮಕ ಮಾಡಿಕೊಳ್ಳುತ್ತಿದೆ: ಪ್ರಿಯಾಂಕ್ ಖರ್ಗೆ ಆರೋಪ

Prasthutha|

ಕಲಬುರಗಿ: ಮುಂದಿನ 402 ಪಿಎಸ್ ಐ ಹುದ್ದೆಗಳೂ ಬುಕ್ ಆಗಿದ್ದು, ಬಿಜೆಪಿ ತನಗೆ ಬೇಕಾದವರನ್ನೇ ನೇಮಕ ಮಾಡಿಕೊಳ್ಳುತ್ತಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

- Advertisement -

ಪಿಎಸ್ ಐ ಅಕ್ರಮ ನೇಮಕಾತಿಗೆ  ಸಂಬಂಧಿಸಿ ಶಾಸಕ ಪ್ರಿಯಾಂಕ್ ಖರ್ಗೆ ಇಬ್ಬರು ಆರೋಪಿಗಳ ಸಂಭಾಷಣೆಯ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಪ್ರಿಯಾಂಕ್ ಖರ್ಗೆ , ಇದರಲ್ಲಿ ಒಬ್ಬ ಪಿಎಸ್ ಐ ಆಗಿ ಆಯ್ಕೆಯಾದ ವ್ಯಕ್ತಿ. ಇನ್ನೊಬ್ಬ ಮಧ್ಯವರ್ತಿಯಾಗಿದ್ದಾನೆ. 545 ಹುದ್ದೆ ಮಾತ್ರವಲ್ಲ ಮುಂದಿನ 402 ಹುದ್ದೆಗಳು ಬುಕ್ ಆಗಿವೆ. ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ ಇದೀಗ ಎಲ್ಲಾ ಅಕ್ರಮ ಬಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಪ್ರಕರಣದಲ್ಲಿ ಎಡಿಜಿಪಿ ಹೆಸರು ಕೂಡ ಕೇಳಿ ಬರುತ್ತಿದೆ. ಎಬಿವಿಪಿ ಕಾರ್ಯಕರ್ತ ಅರುಣ್ ಕುಮಾರ್, ಶ್ರೀರಾಮಸೇನೆ ಕಾರ್ಯಕರ್ತ ಚೇತನ್ ನಂದಗಾಂಬ್,  ಬಿಜೆಪಿ ಕಾರ್ಯಕರ್ತ ಪ್ರವೀಣ್ ಇವರನ್ನೆಲ್ಲಾ ಪಿಎಸ್ ಐ ಹುದ್ದೆಗೆ ನೇಮಕ  ಹೀಗೆ ತನಗೆ ಬೇಕಾದರವನ್ನೇ ಬಿಜೆಪಿ ಇಲಾಖೆಗೆ ನೇಮಿಸಿಕೊಂಡಿದೆ. ಪಿಎಸ್ ಐ ಆಗಿ ನೇಮಕಗೊಂಡವರು ಬಿಜೆಪಿಗೆ ಬೇಕಾದವರು ಎಂದು ಆರೋಪಿಸಿದರು.

Join Whatsapp