ಭೇದ ಭಾವ ಮಾಡದ ಪ್ರಕೃತಿಯಿಂದಲೂ ಪಾಠ ಕಲಿಯದ ಬಲಪಂಥೀಯರು: ನಟ ಪ್ರಕಾಶ್ ರಾಜ್

Prasthutha|

ಮೈಸೂರು: ಭೇದ ಭಾವ ಮಾಡದ ಪ್ರಕೃತಿಯಿಂದಲೂ ಬಲಪಂಥೀಯರು ಪಾಠ ಕಲಿಯಲಿಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಭೀಮಾ ಕೋರೆಗಾಂವ್ 205ನೇ ವಾರ್ಷಿಕೋತ್ಸವ ಪ್ರಯುಕ್ತ ಜಯನಗರ ರೈಲ್ವೆ ಗೇಟ್ ಬಳಿ ಇರುವ ಕೋರೆಂಗಾವ್ ಸ್ಥಂಭಕ್ಕೆ ರವಿವಾರ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ”ಭೀಮಾ ಕೋರೆಂಗಾವ್  ವಿಜಯೋತ್ಸವ ದೇಶದ ಸ್ವಾಭಿಮಾನದ ಸಂಕೇತವಾಗಿದ್ದು, ಇದು ಜೈಭೀಮ್ ಅನುಯಾಯಿಗಳ ಅಸ್ಮಿತೆ ಮತ್ತು ಅಸ್ತಿತ್ವ. ಇದನ್ನು ಸಹಿಸಿಕೊಳ್ಳದ ಮನಸ್ಸುಗಳು ಈ ಚರಿತ್ರೆಯನ್ನು ತಿದ್ದಲು ಹುನ್ನಾರ ನಡೆಸಿವೆ. ಆದರೆ, ಇದು ಸಾಧ್ಯವಿಲ್ಲ” ಎಂದರು.

ಭೂತಕಾಲ, ವರ್ತಮಾನ ಕಾಲ, ಭವಿಷ್ಯತ್ ಕಾಲದ ಬಗ್ಗೆ ಅರಿವಿಲ್ಲದ ಎಡಬಿಡಂಗಿಗಳು ಅವರಿಗೆ ಅನುಕೂಲಕರವಾಗುವಂತೆ ಚರಿತ್ರೆಯನ್ನು ತಿರುಚಲು ಹೊರಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

- Advertisement -

ಜನರನ್ನು ದಾರಿ ತಪ್ಪಿಸಲು ವ್ಯಾಟ್ಸ್‌ಆ್ಯಪ್ ಯೂನಿವರ್ಸಿಟಿ ಮೂಲಕ ಸುಳ್ಳಿನ ಸರಮಾಲೆಯನ್ನೇ ಬಿತ್ತಲಾಗುತ್ತಿದೆ. ಬುಲ್‌ಬುಲ್ ಹಕ್ಕಿ ಮೇಲೆ ಸಾವರ್ಕರ್ ಪ್ರಯಾಣ, ಗೋಮೂತ್ರ ಸೇವನೆ ಆರೋಗ್ಯಕರ ಎಂದು ಹಸಿ ಹಸಿ ಸುಳ್ಳುಗಳನ್ನು ಹಂಚಲಾಗುತ್ತದೆ. ಗೋಮೂತ್ರ ಶ್ರೇಷ್ಠವಾಗಿದ್ದರೆ ಅದನ್ನು ನೀವೇ ಕುಡಿಯಿರಿ. ನಮ್ಮನ್ನು ಸ್ವಚ್ಛವಾಗಿರಲು ಬಿಡಿ’ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

Join Whatsapp