ರಸ್ತೆ ಅಪಘಾತ| ಭಾರತದಲ್ಲಿಯೇ ಅತೀ ಹೆಚ್ಚು ಸಾವು!

Prasthutha|

ಹೊಸದಿಲ್ಲಿ: ವಿಶ್ವದಲ್ಲಿ ಅತಿಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೂ ರಸ್ತೆ ಅಪಘಾತಗಳಲ್ಲಿ ಹೆಚ್ಚು ಜನರು ಮೃತಪಡುವ ದೇಶಗಳ ಪಟ್ಟಿಯಲ್ಲಿ ಭಾರತ ಮೊದಲ ಸಾಲಿನಲ್ಲಿದೆ.

- Advertisement -

ದೇಶದಲ್ಲಿ ರಸ್ತೆ ಅಪಘಾತಗಳು ಮತ್ತು ರಸ್ತೆ ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆ ಪ್ರತಿ ವರ್ಷ ಏರಿಕೆಯಾಗುತ್ತಲೇ ಇವೆ. ವಿಶ್ವದ ಬೇರೆಲ್ಲಾ ದೇಶಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚು ಇದ್ದರೂ, ಅಪಘಾತಗಳಲ್ಲಿ ಮೃತಪಡುವವರ ಸಂಖ್ಯೆ ಕಡಿಮೆ ಇದೆ.

ಭಾರತದಲ್ಲಿ 2021ರ ವೇಳೆ ಸಂಭವಿಸಿದ ಪ್ರತಿ ನೂರು ಅಪಘಾತಗಳಲ್ಲಿ 37ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದು ದೇಶದಲ್ಲಿ ಈವರೆಗಿನ ಗರಿಷ್ಠ ಅಪಘಾತ ಮರಣ ದರವಾಗಿದೆ.  2020ರಲ್ಲಿ 91,239 ಜನರು ಅತಿವೇಗದ ಚಾಲನೆಯ ಕಾರಣಕ್ಕೆ ನಡೆದ ಅಪಘಾತದಲ್ಲಿ ಪ್ರಾಣ ಬಿಟ್ಟಿದ್ದಾರೆ. ಅಂದರೆ, ಮೃತಪಟ್ಟ 1.31 ಲಕ್ಷ ಪ್ರಯಾಣಿಕರ ಪೈಕಿ, ಅತಿವೇಗದ ಚಾಲನೆಯ ಕಾರಣದಿಂದ ಸಂಭವಿಸುವ ಅಪಘಾತಗಳಲ್ಲಿ ಶೇ 69ರಷ್ಟು ಜನರು ಜೀವ ತೆತ್ತಿದ್ದಾರೆ. 2021ರಲ್ಲಿ ಇದೇ ಕಾರಣಕ್ಕೆ ಮೃತಪಟ್ಟವರ ಸಂಖ್ಯೆ 1.07 ಲಕ್ಷಕ್ಕೆ ಹೆಚ್ಚಳವಾಗಿದೆ.

- Advertisement -

 ಮದ್ಯ ಅಥವಾ ಮಾದಕದ್ರವ್ಯದ ಅಮಲಿನಲ್ಲಿ ಚಾಲನೆ ಮಾಡಿದ ಕಾರಣಕ್ಕೆ ನಡೆದ ಅಪಘಾತಗಳಲ್ಲಿ 2021ರಲ್ಲಿ 3,314 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಿರುದ್ಧ ದಿಕ್ಕಿನಲ್ಲಿ ವಾಹನಗಳನ್ನು ಚಾಲನೆ ಮಾಡಿ ಅಥವಾ ಶಿಸ್ತು ಉಲ್ಲಂಘಿಸಿ ನಡೆದ ಅಪಘಾತದಲ್ಲಿ 8,122 ಜನರು ಅಸುನೀಗಿದ್ದಾರೆ. 2,982 ಜನರ ಸಾವಿಗೆ ಚಾಲನೆ ವೇಳೆ ಮೊಬೈಲ್ ಬಳಕೆಯೂ ಕಾರಣವಾಗಿದೆ ಎಂದು ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿರುವ ‘ಭಾರತದಲ್ಲಿ ರಸ್ತೆ ಅಪಘಾತಗಳು –2021’ ವರದಿ ತಿಳಿಸಿದೆ.

Join Whatsapp