ಕುತುಬ್ ಮಿನಾರದ ಎದುರು ಹನುಮಾನ್ ಚಾಲೀಸ್ ಪಠಣ: 30 ಸಂಘಪರಿವಾರದ ಕಾರ್ಯಕರ್ತರ ಬಂಧನ

Prasthutha|

ನವದೆಹಲಿ: ಐತಿಹಾಸಿಕ ಕುತುಬ್ ಮಿನಾರವನ್ನು ವಿಷ್ಟು ಸ್ತಂಭ ಎಂದು ಮರುನಾಮಕರಣಕ್ಕೆ ಒತ್ತಾಯಿಸಿ ಪ್ರತಿಭಟಿಸಿದ ಮತ್ತು ಅದರ ಹೊರಗೆ ಹನುಮಾನ್ ಚಾಲೀಸ ಪಠಿಸಿದ ಘಟನೆ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕನಿಷ್ಠ 30 ಮಂದಿ ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಿ, ಬಿಡುಗಡೆಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

ರಸ್ತೆಯ ಮಧ್ಯದಲ್ಲಿ ಟ್ರಾಫಿಕ್ ಸಮಸ್ಯೆ ಉಂಟುಮಾಡುವ ರೀತಿಯಲ್ಲಿ ಪ್ರತಿಭಟಿಸಿದ ಕಾರಣ ಅವರನ್ನು ಬಂಧಿಸಲಾಗಿದೆ. ಸಂಘಪರಿವಾರದ ಪ್ರತಿಭಟನೆಯಿಂದಾಗಿ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಯುನೈಟೆಡ್ ಹಿಂದೂ ಫ್ರಂಟ್ ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಭಗವಾನ್ ಗೋಯಲ್, ಕುತುಬ್ ಮಿನಾರವನ್ನು ಮಹಾರಾಜ ವಿಕ್ರಮಾದಿತ್ಯ ಎಂಬಾತ ನಿರ್ಮಿಸಿದ ‘ವಿಷ್ಣು ಸ್ತಂಭ’ ಎಂದು ವಾದಿಸಿದ್ದಾರೆ.

- Advertisement -

ಈ ಕುರಿತು ಸುದ್ದಿಗಾರರೊಂದಿದೆ ಮಾತನಾಡಿದ ಅವರು, ವಿಕ್ರಮಾದಿತ್ಯ ನಿರ್ಮಿಸಿದ ಸ್ತಂಭವನ್ನು ಕುತುಬುದ್ದೀನ್ ಐಬಕ್ ವಶಪಡಿಸಿಕೊಂಡಿದ್ದನು. ಈತ ಸಂಕೀರ್ಣದಲ್ಲಿ 27 ದೇವಾಲಯಗಳಿದ್ದವು ಮತ್ತು ಅವುಗಳನ್ನು ಐಬಕ್ ನಾಶಪಡಿಸಿದ್ದನು. ಕುತುಬ್ ಮಿನಾರ್ ಸಂಕೀರ್ಣದಲ್ಲಿ ಇರಿಸಲಾಗಿರುವ ಹಿಂದೂ ದೇವರುಗಳ ವಿಗ್ರಹವನ್ನು ಜನರು ಕಾಣ ಬಹುದಾದ್ದರಿಂದ ಇದಕ್ಕೆಲ್ಲ ಪುರಾವೆಗಳು ಲಭ್ಯವಿದೆ. ಕುತುಬ್ ಮಿನಾರವನ್ನು ವಿಷ್ಟು ಸ್ತಂಭ ಎಂದು ಕರೆಯಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಈ ವೇಳೆ ಪ್ರತಿಭಟನಾಕಾರರು ಜೈ ಶ್ರೀರಾಮ ಘೋಷಣೆ, ಹನುಮಾನ್ ಚಾಲೀಸ್ ಪಠಣ ಮತ್ತು ಹಿಂದೂ ದೇವರಾದ ವಿಷ್ಟುವಿನ ನಂತರ ಕುತುಬ್ ಮಿನಾರವನ್ನು ವಿಷ್ಟು ಸ್ತಂಭ ಎಂದು ಕರೆಯುವ ಫಲಕವನ್ನು ಪ್ರದರ್ಶಿಸಿದ್ದಾರೆ.



Join Whatsapp