ಮಲೆನಾಡಿನಲ್ಲಿ ಮತ್ತೆ ಹುಲಿಯ ಹವಾ; ಮುಂದುವರಿದ ವ್ಯಾಘ್ರನ ರುದ್ರ ತಾಂಡವ

Prasthutha|

ಕೊಡಗು: ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿಯ ಅಟ್ಟಹಾಸ ಮುಂದುವರೆದಿದ್ದು, ಪೊನ್ನಂಪೇಟೆ ಮತ್ತು ವಿರಾಜ ಪೇಟೆ ವ್ಯಾಪ್ತಿಯಲ್ಲಿ ಜನರ ಆತಂಕದಲ್ಲಿ ಜೀವಿಸುವಂತಾಗಿದೆ.  ಅನಿರೀಕ್ಷಿತವಾಗಿ  ಪ್ರತ್ಯಕ್ಷವಾಗುತ್ತಿರುವ ಹುಲಿಗಳಿಂದಾಗಿ ಬೆಳೆಗಾರರು ಮತ್ತು ಕಾರ್ಮಿಕರು ತೋಟಕ್ಕೆ ಹೋಗಲು ಭಯ ಪಡುತ್ತಿದ್ದಾರೆ. ಇದರಿಂದಾಗಿ ತೋಟದ ಕೆಲಸ ನನೆಗುದಿಗೆ ಬಿದ್ದಿದೆ.

- Advertisement -

ಬಿ.ಶೆಟ್ಟಿಗೆರಿಯಲ್ಲಿ ಹುಲಿ ದಾಳಿಗೆ 2 ಕುರಿ ಬಲಿಯಾಗಿದ್ದು, ತೀತಿರಮಾಡ ಸುರೇಶ್ ಎಂಬವರ  ಕುರಿ ಹುಲಿ ದಾಳಿಗೆ ಬಲಿಯಾಗಿದೆ.  ಪೊನ್ನಂಪೇಟೆ ತಾಲೂಕು ಹುದಿಕೇರಿ ಗ್ರಾ. ಪಂ. ವ್ಯಾಪ್ತಿಯ ಚೀನಿವಾಡ ಬೇಗೂರಿನಲ್ಲಿ ಮಂದಚಂಡ ದಿನೇಶ್ ಚೆಟ್ಟಿಯಪ್ಪ ಎಂಬವರ ಜಮೀನಿನಲ್ಲಿಯೂ ಹುಲಿಯ  ಹೆಜ್ಜೆ ಗುರುತು ಕಾಣಿಸಿಕೊಂಡಿದೆ.

- Advertisement -

ಹುಲಿ ಸೆರೆ ಕಾರ್ಯಾಚರಣೆಯ ಅರಣ್ಯ ಇಲಾಖೆ ತಂಡ ಸಮೀಪದಲ್ಲೇ ಬೀಡು ಬಿಟ್ಟಿದ್ದರೂ ಈ ವ್ಯಾಪ್ತಿಯಲ್ಲಿ ವ್ಯಾಘ್ರ ಸಂಚಾರ ಅವರ ಗಮನಕ್ಕೆ ಬಾರದಿರುವುದು ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ.

Join Whatsapp