ಮುಂದಿನ ಲೋಕಸಭೆಗೆ ದೊಡ್ಡ ಜನಾದೇಶದೊಂದಿಗೆ ಮರಳುತ್ತೇನೆ: ಮೊಯಿತ್ರಾ

Prasthutha|

ಕೋಲ್ಕತ್ತಾ: ಸದನದಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಸಂಸದ ವಿನೋದ್ ಕುಮಾರ್ ಸೋಂಕರ್ ಅಧ್ಯಕ್ಷತೆಯ ಸಮಿತಿಯು ಗುರುವಾರ ಟಿಎಂಸಿ ಹಿರಿಯ ನಾಯಕಿ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸುವಂತೆ ಸೂಚಿಸುವ ತನ್ನ ವರದಿಯನ್ನು ಅಂಗೀಕರಿಸಿದೆ.

- Advertisement -

ಇದಕ್ಕೆ ಪ್ರತಿಕ್ರಿಯಿಸಿದ ಮೊಯಿತ್ರಾ, ಇದು ಕಾಂಗರೂ ಕೋರ್ಟ್ ನಿಂದ ಪೂರ್ವ ನಿಯೋಜಿತ ಪಂದ್ಯ. ಭಾರತೀಯ ಸಂಸದೀಯ ಪ್ರಜಾಪ್ರಭುತ್ವದ ಸಾವನ್ನು ಸೂಚಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಈ ಲೋಕಸಭೆಯಲ್ಲಿ ಅವರು ನನ್ನನ್ನು ಹೊರಹಾಕಿದರೂ, ಮುಂದಿನ ಲೋಕಸಭೆಯಲ್ಲಿ ದೊಡ್ಡ ಜನಾದೇಶದೊಂದಿಗೆ ಹಿಂದಿರುಗುತ್ತೇನೆ ಎಂದೂ ಹೇಳಿದ್ದಾರೆ.

- Advertisement -

ಶಿಫಾರಸನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ ಮೊಯಿತ್ರಾ, ಮೊದಲನೆಯದಾಗಿ ಇದು ಕೇವಲ ಶಿಫಾರಸು, ಸದ್ಯಕ್ಕೆ ಏನೂ ಆಗಿಲ್ಲ. ಅವರು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅದನ್ನು ತೆಗೆದುಕೊಳ್ಳಲಿ. ಇದರಿಂದ ನಿಜವಾಗಿಯೂ ನನಗೆ ಏನನ್ನೂ ಮಾಡಲಾಗದು, ಇದರಿಂದ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಹಾಸ್ಯವನ್ನು ಬಿಜೆಪಿ ಇಡೀ ದೇಶಕ್ಕೆ ತೋರಿಸಿದೆ ಎಂದು ನನಗೆ ಸಂತೋಷವಾಗಿದೆ ಎಂದೂ ಮೊಯಿತ್ರಾ ಹೇಳಿದರು. ಮೊದಲು, ಅವರು ನನ್ನನ್ನು ಹೊರಹಾಕಲಿ. ನಂತರ ಮುಂದಿನ ಕ್ರಮಗಳನ್ನು ಪ್ರಕಟಿಸುವುದಾಗಿ ಮೊಹಿತ್ರಾ ತನ್ನ ಮುಂದಿನ ಕ್ರಮ ಕುರಿತು ತಿಳಿಸಿದರು.

Join Whatsapp