ಪಾದಯಾತ್ರೆ ಅರ್ಧಕ್ಕೆ ಮೊಟಕುಗೊಳಿಸಿ ಹಿಂದಿರುಗಿದ ಸಿದ್ದರಾಮಯ್ಯ । ಕೆಣಕಿದ ರಾಜ್ಯ ಬಿಜೆಪಿ

Prasthutha|

ಬೆಂಗಳೂರು: ಅನಾರೋಗ್ಯದಿಂದಾಗಿ ಮೇಕೆದಾಟು ಪಾದಯಾತ್ರೆಯನ್ನು ಮೊಟಕುಗೊಳಿಸಿ ನಿನ್ನೆ ಬೆಂಗಳೂರಿಗೆ ವಾಪಸ್ಸಾದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ರಾಜ್ಯ ಬಿಜೆಪಿ ಇಂದು ಕೆಣಕಿದೆ.

- Advertisement -

ನಾವಿಬ್ಬರೇ ನಡೆಯುತ್ತೇವೆ ಎಂದು ಸವಾಲು ಹಾಕಿದ್ದ ಸಿದ್ದರಾಮಯ್ಯ ನಾಲ್ಕೇ ಕಿಲೋಮೀಟರ್ ನಡೆದು ಸುಸ್ತಾದರೆ ಹೇಗೆ? ಸುಳ್ಳಿನ ಜಾತ್ರೆಯಲ್ಲಿ ಡಿಕೆಶಿ ಅವರಿಗೆ ಅರ್ಧದಲ್ಲೇ ಕೈ ಕೊಟ್ಟಿದ್ದರ ಹಿಂದೆ ಪೂರ್ವ ನಿಯೋಜಿತ ತಂತ್ರವಿದೆಯೇ ? ಎಂದು ಸಾಮಾಜಿಕ ಜಾಲತಾಣದ ಮೂಲಕ ಪ್ರಶ್ನಿಸಿದೆ.

ಕೋವಿಡ್ ಪರೀಕ್ಷೆಗೆ ನಿರಾಕರಿಸಿರುವ ಡಿಕೆ ಶಿವಕುಮಾರ್ ಅವರ ನಡೆಯನ್ನು ಸಹ ಬಿಜೆಪಿ ಟೀಕಿಸಿದೆ. ಮಾಸ್ಕ್ ಧರಿಸಿದೇ ಪಾದಯಾತ್ರೆ ನಡೆಸಲಾಗಿದೆ. ವಿಪರೀತ ಕೆಮ್ಮಿನ ನಡುವೆಯೂ ಕೋವಿಡ್ ಪರೀಕ್ಷೆ ನಿರಾಕರಿಸಿದ್ದೀರಿ. ನೆಲದ ಕಾನೂನಿನ ಬಗ್ಗೆ ಕಿಂಚಿತ್ ಗೌರವ ಇದೆಯೇ? ಎಂದು ಬಿಜೆಪಿ ಟ್ವೀಟರ್ ಮೂಲಕ ಪ್ರಶ್ನಿಸಿದೆ.

- Advertisement -

ಈ ಮಧ್ಯೆ ಸಿದ್ದರಾಮಯ್ಯ ಅವರು ಸುಧಾರಿಸಿಕೊಳ್ಳುತ್ತಿದ್ದು, ಮೇಕೆದಾಟು ಪಾದಯಾತ್ರೆಯಲ್ಲಿ ಮಂಗಳವಾರದಿಂದ ಭಾಗವಹಿಸಲಿದ್ದಾರೆ. ಸುಸ್ತು, ಜ್ವರದಿಂದ ಬಳಲಿದ್ದ ಅವರು ಬೆಂಗಳೂರಿಗೆ ವಾಪಾಸಾಗಿ ಕುಟುಂಬದ ವೈದ್ಯರಿಂದ ಚಿಕಿತ್ಸೆ ಪಡೆದು ಅವರ ಸಲಹೆಯಂತೆ ವಿಶ್ರಾಂತಿ ಪಡೆದಿದ್ದರು.


ವೈದ್ಯರ ಸಲಹೆ ಮೇರೆಗೆ ಸಿದ್ದರಾಮಯ್ಯ ಅವರು ಸೋಮವಾರ ಕೂಡಾ ತಮ್ಮ‌ ಮನೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಮಂಗಳವಾರದಿಂದ ಮತ್ತೆ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.‌

Join Whatsapp