ವಾಟ್ಸಾಪ್’ನಲ್ಲಿ ಕೋಮು ವೈಷಮ್ಯದ ಸಂದೇಶ ಕಳುಹಿಸಿದ ನಿವೃತ್ತ ಡಿಜಿಪಿಗೆ ‘ಗೇಟ್’ಪಾಸ್’ !

Prasthutha|

- Advertisement -

ಭೋಪಾಲ್: ಹಿರಿಯ IPS  ಅಧಿಕಾರಿಗಳು ಸದಸ್ಯರಾಗಿರುವ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಕೋಮು ವೈಷಮ್ಯದ ಪೋಸ್ಟ್ ಹಾಕಿದ ನಿವೃತ್ತ ಡಿಜಿಪಿ ಮೈಥಿಲಿ ಶರಣ್ ಗುಪ್ತಾರನ್ನು ವಾಟ್ಸಾಪ್ ಗುಂಪಿನಿಂದ ತೆಗೆದುಹಾಕಲಾಗಿದೆ. ಮಧ್ಯಪ್ರದೇಶದ ಡಿಜಿಪಿ ವಿವೇಕ್ ಜೊಹ್ರಿ ಸೂಚನೆಯ ಮೇರೆಗೆ ಮಾಜಿ ಹಿರಿಯ ಪೊಲೀಸ್ ಅಧಿಕಾರಿಗೆ ಗೇಟ್’ಪಾಸ್ ನೀಡಲಾಗಿದೆ.

- Advertisement -

ಮುಸ್ಲಿಮರ ವಿರುದ್ಧ ದ್ವೇಷಭಾಷಣದ ಯೂಟ್ಯೂಬ್ ವೀಡಿಯೋದ ಲಿಂಕ್’ಅನ್ನು IPS  ಅಧಿಕಾರಿಗಳು ಮಾತ್ರವಿರುವ ವಾಟ್ಸಾಪ್ ಗ್ರೂಪ್’ನಲ್ಲಿ ನಿವೃತ್ತ ಡಿಜಿಪಿ ಮೈಥಿಲಿ ಶರಣ್ ಗುಪ್ತಾ ಶೇರ್ ಮಾಡಿದ್ದರು. ‘ಭಾರತ-ಪಾಕಿಸ್ತಾನ ವಿಭಜನೆಯ ವೇಳೆ ಭಾರತದಲ್ಲೇ ಉಳಿದ ತಮ್ಮ ಹಿರಿಯರ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವ ಭಾರತೀಯ ಮುಸ್ಲಿಮರ ವಿರುದ್ಧ ಮಾಡಲಾಗಿರುವ ಭಾಷಣ ಇದಾಗಿದೆ. ತಮ್ಮ ಪೂರ್ವಜರ ಬಗ್ಗೆ ಹೆಮ್ಮೆಯಿರುವ ಭಾರತೀಯ ಮುಸ್ಲಿಮರಿಗೆ ಹೇಗೆ ಪ್ರತ್ಯುತ್ತರ ಕೊಡಬೇಕು ಎಂಬುದು ಈ ವೀಡಿಯೋದಲ್ಲಿದೆ ಭಾರತದ ಕಾನೂನಿಡಿಯಲ್ಲಿ ಮುಸ್ಲಿಮರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಾಗಿದೆ. ಇದುವೆ ಎಲ್ಲಾ ಸಮಸ್ಯೆಗಳ ಮೂಲ, ಈ ಚಾನಲ್’ಅನ್ನು ಎಲ್ಲರೂ ಸಬ್’ಸ್ಕ್ರೈಬ್ ಆಗಿ ಎಂದು ಶರಣ್ ಗುಪ್ತಾ ಹೇಳಿದ್ದರು.

ತಾವು ಹಾಕಿದ ಲಿಂಕ್’ಅನ್ನು ತಕ್ಷಣವೇ ಡಿಲೀಟ್ ಮಾಡುವಂತೆ ಶರಣ್ ಗುಪ್ತಾರಿಗೆ ಮನವಿ ಮಾಡಿದರೂ, ಗುಪ್ತಾ ಮಾನ್ಯ ಮಾಡಿರಲಿಲ್ಲ. ಕೂಡಲೇ ಇದಕ್ಕೆ ಪ್ರತಿಕ್ರಿಯಿಸಿದ್ದ ಮಧ್ಯಪ್ರದೇಶದ ಡಿಜಿಪಿ ವಿವೇಕ್ ಜೊಹ್ರಿ, ಈ ರೀತಿಯ ಕೋಮುವಾದದ ಹಾಗೂ ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಇಲ್ಲಿ ಚರ್ಚಿಸುವಂತಿಲ್ಲ, ನಿಮ್ಮ ಪೋಸ್ಟ್’ಅನ್ನು ಡಿಲೀಟ್ ಮಾಡಿ. ಡಿಲೀಟ್ ಮಾಡಲು ಅವರು ನಿರಾಕರಿಸಿದರೆ ಅವರನ್ನು ಗ್ರೂಪ್’ನಿಂದ ತೆಗೆದುಹಾಕಿ ಎಂದು ವಿವೇಕ್ ಜೊಹ್ರಿ ಸೂಚನೆ ಕೊಟ್ಟಿದ್ದರು.

Join Whatsapp