“ಗೆಲುವು ನಮ್ಮದೇ…! ಫಲಿತಾಂಶ ಮುಂದಿನ ವಾರ ಆರಂಭವಾಗಲಿದೆ” | ಖುರ್ಚಿ ಬಿಡಲೊಪ್ಪದ ಟ್ರಂಪ್

Prasthutha: November 11, 2020

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ನಡೆದು ಒಂದು ವಾರ ಕಳೆದರೂ, ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿನ ತಮ್ಮ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಾಗಿಲ್ಲ.

ನಾವೇ ಗೆಲ್ಲುವುದು ಎಂದು ಹಠ ಹಿಡಿದಿರುವ ಟ್ರಂಪ್, ಭಾವೀ ಅಧ್ಯಕ್ಷ ಜೋ ಬೈಡನ್ ಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಚಾಲನೆ ನೀಡಲು ಶ್ವೇತ ಭವನದಲ್ಲಿ ಇನ್ನೂ ಅವಕಾಶ ಕೊಟ್ಟಿಲ್ಲ.

ಜೋ ಬೈಡನ್ ಗೆಲುವಿಗೆ ಜಾಗತಿಕ ನಾಯಕರು ಈಗಾಗಲೇ ಅಭಿನಂದಿಸಿದ್ದರೂ, ಅಧ್ಯಕ್ಷ ಟ್ರಂಪ್ ಈ ನಡೆ ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶವನ್ನು ಗೊಂದಲದ ಗೂಡಾಗಿಸಿದೆ.  

“ನಾವು ಗೆಲ್ಲಲಿದ್ದೇವೆ’’ ಎಂದು ಟ್ವೀಟ್ ಮಾಡಿರುವ ಟ್ರಂಪ್, “ನಾವು ದೊಡ್ಡ ಪ್ರಗತಿ ಸಾಧಿಸುತ್ತಿದ್ದೇವೆ. ಫಲಿತಾಂಶ ಮುಂದಿನ ವಾರ ಆರಂಭವಾಗಲಿದೆ. ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠವನ್ನಾಗಿ ಮಾಡಿ’’ ಎಂದು ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಬೈಡನ್ ಗೆಲುವನ್ನು ಒಪ್ಪದ ವಿದೇಶಾಂಗ ಸಚಿವ ಮೈಕ್ ಪೊಂಪ್ಯೊ ಕೂಡ, ಎರಡನೇ ಅವಧಿಗೆ ಟ್ರಂಪ್ ಆಡಳಿತ ಬರಲಿದೆ ಎಂದಿರುವುದಕ್ಕೆ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ