ಬಿಹಾರ ಚುನಾವಣಾ ಫಲಿತಾಂಶದಲ್ಲಿ ವಂಚನೆ : ಕಾಂಗ್ರೆಸ್ ಆರೋಪ

Prasthutha|

ಪಾಟ್ನಾ : ಅಮೆರಿಕದಲ್ಲಿ ಆಡಳಿತಾರೂಢ ರಿಪಬ್ಲಿಕನ್ ಪಕ್ಷ ಅಧ್ಯಕ್ಷೀಯ ಚುನಾವಣಾ ಫಲಿತಾಂಶದಲ್ಲಿ ಅಕ್ರಮ ಎಸಗಲಾಗಿದೆ ಎಂದು ಪ್ರತಿಪಾದಿಸಿದರೆ, ಬಿಹಾರದಲ್ಲಿ ಪ್ರತಿಪಕ್ಷಗಳು ಮತ ಎಣಿಕೆಯಲ್ಲಿ ವಂಚನೆ ನಡೆದಿದೆ ಎಂದು ಆಪಾದಿಸಿವೆ. ಬಿಹಾರ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳಿಗೆ ಮೋಸ ಮಾಡಲಾಗಿದೆ ಎಂದು ಕಾಂಗ್ರೆಸ್ ನೇರವಾಗಿ ಆಪಾದಿಸಿದೆ.

- Advertisement -

ತಮ್ಮ ಪಕ್ಷದ ಅಭ್ಯರ್ಥಿಗಳು ಕಿಶನ್ ಗಂಜ್ ಮತ್ತು ಸಕ್ರಾ ವಿಧಾನಸಭಾ ಕ್ಷೇತ್ರಗಳಲ್ಲಿ ವಿಜೇತರಾಗಿದ್ದಾರೆ, ಆದರೆ ಅಧಿಕಾರಿಗಳು ವಿಜೇತ ಪ್ರಮಾಣ ಪತ್ರ ನೀಡಿಲ್ಲ ಎಂದು ಬಿಹಾರ ಕಾಂಗ್ರೆಸ್ ಚುನಾವಣಾ ಸಂಯೋಜನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಪಾದಿಸಿದ್ದಾರೆ.

“ಬಿಹಾರ ಚುನಾವಣೆಯಲ್ಲಿ ಇನ್ನೆಷ್ಟು ವಂಚನೆಗಳು ನಡೆಯಲಿವೆ?. ಕಿಶನ್ ಗಂಜ್ ನ ಕಾಂಗ್ರೆಸ್ ಅಭ್ಯರ್ಥಿ 1266 ಮತಗಳಿಂದ ಗೆದ್ದಿದ್ದರು. ಬಿಜೆಪಿ ಅಭ್ಯರ್ಥಿ ಮನೆಗೆ ಹೋಗಿದ್ದರು. ಆದರೆ, ನಮ್ಮ ಅಭ್ಯರ್ಥಿಗೆ ವಿಜೇತ ದೃಢೀಕರಣ ಪತ್ರ ನೀಡಿಲ್ಲ. ಪ್ರಜಾಪ್ರಭುತ್ವದ ಹತ್ಯೆ ನಡೆದಿದೆ. ಬಿಹಾರದಲ್ಲಿ ಫಲಿತಾಂಶವನ್ನು ಅಪಹರಿಸಲಾಗುತ್ತಿದೆ’’ ಎಂದು ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ. ಆದರೆ, ಚುನಾವಣಾ ಆಯೋಗ ಈ ಆರೋಪಗಳನ್ನು ತಳ್ಳಿ ಹಾಕಿದೆ.

- Advertisement -

ಇದಕ್ಕೂ ಮೊದಲು, ಸಕ್ರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ 600 ಮತಗಳಿಂದ ವಿಜೇತರಾಗಿದ್ದಾರೆ ಎಂದು ಸುರ್ಜೇವಾಲ ಹೇಳಿದ್ದರು. ಆದರೆ, ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 1,700 ಮತಗಳಿಂದ ಸೋಲಾಗಿದೆ ಎಂದು ಘೋಷಿಸಲಾಗಿದೆ.    

Join Whatsapp