ಚಾಮರಾಜನಗರ ವಿಮೆನ್ ಇಂಡಿಯಾ ಮೂವ್ಮೆಂಟ್ ಅಧ್ಯಕ್ಷೆಯಾಗಿ ರೇಷ್ಮಾ ಬಾನು ಆಯ್ಕೆ

Prasthutha|

 ಚಾಮರಾಜನಗರ: ವಿಮೆನ್ ಇಂಡಿಯ ಮೂವ್ಮೆಂಟ್ ಚಾಮರಾಜನಗರ ಜಿಲ್ಲಾ ಪ್ರತಿನಿಧಿ ಸಭೆಯು ದಿನಾಂಕ ಜು.8ರಂದು ಚಾಮರಾಜನಗರದಲ್ಲಿ ನಡೆಯಿತು.

- Advertisement -

 ತೌಸಿಯ ಭಾನು ರವರ ಸಭಾಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 2021-23 ಅವಧಿಯ ವರದಿಯನ್ನು ಮಂಡಿಸಲಾಯಿತು. ಕಾರ್ಯಕ್ರಮವನ್ನು ವಿಮ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

 ನೂತನ ಜಿಲ್ಲಾಧ್ಯಕ್ಷೆಯಾಗಿ ರೇಷ್ಮಾ ಬಾನು, ಉಪಾಧ್ಯಕ್ಷೆಯಾಗಿ ವಾಹಿದ ಖಾನುಮ್,  ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ರುಮಾನಾ ತಾಜ್, ಕಾರ್ಯದರ್ಶಿಗಳಾಗಿ  ಫೌಝಿಯಾ  ಬಾನು, ಕೋಶಾಧಿಕಾರಿಯಾಗಿ ಶಬಾನ ಬೇಗಂ, ಸಮಿತಿ ಸದಸ್ಯರುಗಳಾಗಿ ಸುಮ ರಾಜೇಂದ್ರ, ತೌಸಿಯ ಬಾನು, ಆಯಿಷಾ ಹುದಾ ಹಾಗೂ ಶ್ರುತಿ  ಪ್ರಕಾಶ್ ರವರು ಆಯ್ಕೆಯಾಗಿರುತ್ತಾರೆ.

- Advertisement -

 ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷೆ ರೇಷ್ಮಾ ತಾಜ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ರುಮಾನ ತಾಜ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.