ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ರದ್ದು – NSUI ಸಂಭ್ರಮ

Prasthutha|

ಮಂಗಳೂರು: NSUI ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಕರ್ನಾಟಕ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಿರುವುದನ್ನು ಬೆಂಬಲಿಸಿ ಸಂಭ್ರಮಾಚರಣೆ ಜು.8ರಂದು ಮಲ್ಲಿಕಟ್ಟೆಯ ಇಂದಿರಾ ಭವನದಲ್ಲಿ ನಡೆಯಿತು.

- Advertisement -

NSUI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಸುಹಾನ್‌ ಆಳ್ವ ಅವರ ನೇತೃತ್ವದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಸಿಹಿ ತಿಂಡಿ ಹಂಚಿ ಸಂಭ್ರಮಿಸಲಾಯಿತು. ಸಿದ್ಧರಾಮಯ್ಯ ಸರಕಾರಕ್ಕೆ ಜೈಕಾರ ಘೋಷಣೆಗಳನ್ನು ಕೂಗಲಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಈ ಸಂದರ್ಭ ಮಾತನಾಡಿದ ಸುಹಾನ್‌ ಆಳ್ವ ಅವರು ಇದು NSUIನ ಸಂಘಟನಾತ್ಮಕ ಹೋರಾಟಕ್ಕೆ ಸಂದ ಜಯವಾಗಿದೆ.

ವಿದ್ಯಾರ್ಥಿ ವಿರೋಧಿ ನೀತಿಯನ್ನು ರಾಷ್ಟ್ರಾದ್ಯಂತ ಹೇರಲು ಮುಂದಾಗಿದ್ದರು. ನಾವು ಹಲವು ಬಾರಿ ಪ್ರತಿಭಟನೆ ನಡೆಸಿದ್ದೆವು. ನಮಗೆ ಜಯ ಸಿಕ್ಕಿದೆ. ಇದು ನ್ಯಾಷನಲ್ ಪಾಲಿಸಿ ಅಲ್ಲ, ನಾಗ್ಪುರ ಪಾಲಿಸಿ ಆಗಿತ್ತು. ಬಜೆಟ್ ಮಂಡನೆ ವೇಳೆ ಬಹಿಷ್ಕಾರ ಮಾಡಿದ ಸಿಎಂ ಸಿದ್ಧರಾಮಯ್ಯ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ನುಡಿದರು.