ಲಕ್ನೋ | ಡೆಲ್ಟಾ ರೂಪಾಂತರಿ ಆತಂಕ : ಲಸಿಕಾ ಅಭಿಯಾನ ತೀವೃಗೊಳಿಸಲು ಮನವಿ

Prasthutha|

ಉತ್ತರ ಪ್ರದೇಶ : ಕೊರೋನಾ ವೈರಸ್‌ನ ಡೆಲ್ಟಾ ಪ್ಲಸ್ ರೂಪಾಂತರವು ಮಾರಕಾವಾಗಿದ್ದು , ಇನ್ನಷ್ಟು ಸಾವು ನೋವುಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ತಜ್ಞರ ವರದಿಗಳ ಬೆನ್ನಲ್ಲೇ ಲಸಿಕಾ ಅಭಿಯಾನವನ್ನು ತೀವೃಗೊಳಿಸುವಂತೆ ಮುಸ್ಲಿಂ ಧರ್ಮ ಗುರು ಖಾಲೀದ್ ರಶೀದ್ ಫಿರಂಗಿ ಮಹಾಲಿ ಸರಕಾರಕ್ಕೆ ಮನವಿ ಮಾಡಿದ್ದಾರೆ.
ದೇಶದಲ್ಲಿ ಈವರೆಗೆ ೫೦ ಕ್ಕೂ ಹೆಚ್ಚು ಕೊರೋನಾ ರೂಪಾಂತರಿ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ವ್ಯಾಕ್ಸೀನೇಷನ್ ಅಭಿಯಾನವನ್ನು ತೀವ್ರಗೊಳಿಸುವಂತೆ ಮನವಿ ಮಾಡಲಾಗಿದೆ.

- Advertisement -

ರಾಜ್ಯದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಇನ್ನಷ್ಟು ಉಲ್ಭಣಗೊಳ್ಳುವುದಕ್ಕಿಂತ ಮುಂಚಿತವಾಗಿ ಎಲ್ಲರೂ ಲಸಿಕೆ ಪಡೆಯುವಂತೆ ಖಾಲೀದ್ ರಶೀದ್ ಮಸೀದಿ ಧ್ವನಿವರ್ಧಕಗಳ ಮೂಲಕ ಮನವಿ ಮಾಡಿದ್ದಾರೆ. ಶುಕ್ರವಾರ ನಮಾಝಿನ ನಂತರ ಲಸಿಕೆ ಪಡೆಯಲು ವಿನಂತಿಸಲಾಗಿದೆ. ಜನರೇ ಸ್ವಯಿಚ್ಛೆಯಿಂದ ಲಸಿಕೆಯನ್ನು ಪಡೆದುಕೊಳ್ಳಬೇಕು, ಲಸಿಕೆಗಳು ನಮ್ಮ ಜೀವನಕ್ಕೆ ಮತ್ತು ಆರೋಗ್ಯಕ್ಕೆ ಅತ್ಯಾವಶಕಯಾಗಿದೆ ಎಂದು ಹೇಳಿದ್ದಾರೆ.

ಡೆಲ್ಟಾ ಪ್ಲಸ್ ರೂಪಾಂತರದ ಬಗ್ಗೆ ಯುಪಿ ಸರಕಾರವು ಎಚ್ಚರವಹಿಸಿದೆ . ಮುಖ್ಯಮಂತ್ರಿ ಅವರ ಸೂಚನೆಯ ಪ್ರಕಾರ ಬೇರೆ ಅಂತರ್ ರಾಜ್ಯಗಳಿಂದ ಬರುವ ಜನರನ್ನು ರೈಲ್ವೇ ನಿಲ್ದಾಣ ಮತ್ತು ವಿಮಾನ ನಿಲ್ದಾಣದಲ್ಲಿ ನಿಗಾ ವಹಿಸಲಾಗಿದೆ ಎಂದು ತಿಳಿಸಲಾಗಿದೆ.



Join Whatsapp