Flash News: ಬಿಹಾರ ಚುನಾವಣೆ: ಆರ್.ಜೆ.ಡಿ 33 ಕ್ಷೇತ್ರಗಳಲ್ಲಿ, ಎನ್.ಡಿ.ಎ 34 ಕ್ಷೇತ್ರಗಳಲ್ಲಿ ಜಯ

Prasthutha|

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ 2020ರ ಮತಎಣಿಕೆ ನೇರಪ್ರಸಾರ: ಬಿಹಾರದ 55 ಮತಎಣಿಕೆ ಕೆಂದ್ರಗಳಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಿದೆ. ಮತಎಣಿಕೆ ಆರಂಭವಾಗುತ್ತಿದ್ದಂತೆ ಆರ್.ಜೆ.ಡಿ ನೇತೃತ್ವದ ಮಹಾ ಮೈತ್ರಿ ಮುನ್ನಡೆ ಸಾಧಿಸಿದರೂ ನಂತರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್.ಡಿ.ಎ ನಿರಂತರ ಮುನ್ನಡೆಯನ್ನು ಕಾಯ್ದುಕೊಂಡಿದೆ. ಮುಂದಿನ 5 ವರ್ಷಗಳಿಗೆ ನಿತೀಶ್ ಕುಮಾರ್ ಆಡಳಿತ ಮುಂದುವರಿಯಲಿದೆಯೇ ಅಥವಾ ತೇಜಸ್ವಿ ಯಾದವ್ ಗೆ ದಾರಿ ಮಾಡಿಕೊಡಲಿದ್ದಾರೆಯೇ ಎಂಬುದು ಚುನಾವಣಾ ಫಲಿತಾಂಶದಿಂದ ತಿಳಿಯಲಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಆರ್.ಜೆ.ಡಿ ನೇತೃತ್ವದ ಮಹಾಮೈತ್ರಿ ಗೆಲುವು ಸಾಧಿಸಲಿದೆಯೆಂದು ಭವಿಷ್ಯ ನುಡಿದಿದ್ದವು. ಎಲ್ಲರ ಕಣ್ಣು ರಾಜ್ಯದ 5 ಮತ ಎಣಿಕೆ ಕೇಂದ್ರಗಳ ಮೇಲೆ ನೆಟ್ಟಿದೆ.  ಗೆಲುವಿನ ಮಾಲೆ ಯಾರ ಕೊರಳಿಗೆ ಬೀಳಲಿದೆ? ಕ್ಷಣ ಕ್ಷಣದ ಸುದಿಗಾಗಿ ವೀಕ್ಷಿಸಿ ‘ಪ್ರಸ್ತುತ’ ಸುದ್ದಿ ಜಾಲ.

Join Whatsapp