ಹೊಸದಿಲ್ಲಿ: ಟಿ.ಆರ್.ಪಿ ಹಗರಣ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕೆಂಬ ರಿಪಬ್ಲಿಕ್ ಟಿ.ವಿ ಕೋರಿಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ತನಿಖೆ ಎದುರಿಸುವ ಯಾವುದೇ ಸಾಮಾನ್ಯ ನಾಗರಿಕನಂತೆ ಬಾಂಬೆ ಹೈಕೋರ್ಟನ್ನು ಸಂಪರ್ಕಿಸುವಂತೆ ಚಾನೆಲ್ ಗೆ ಸೂಚಿಸಿದೆ.
“ನೀವು ಈಗಾಗಲೇ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದೀರಿ. ಹೈಕೋರ್ಟ್ ಹೊರತು ಈ ಅರ್ಜಿಯನ್ನು ನಾವು ಕೈಗೆತ್ತಿಕೊಳ್ಳುವುದರಿಂದ, ನಮಗೆ ಹೈಕೋರ್ಟ್ ಗಳ ಮೇಲೆ ನಂಬಿಕೆಯಿಲ್ಲ ಎಂಬ ಸಂದೇಶವನ್ನು ನೀಡಿದಂತಾಗುತ್ತದೆ. ಅಪರಾಧ ದಂಡ ಸಂಹಿತೆಯ ತನಿಖೆಯ ಸಂಕಟವನ್ನು ಎದುರಿಸುವ ಯಾವುದೇ ಇತರ ಸಾಮಾನ್ಯ ನಾಗರಿಕನಂತೆ ಹೈಕೋರ್ಟ್ ಗೆ ಹೋಗಿರಿ” ಎಂದು ತ್ರಿಸದಸ್ಯ ಪೀಠದ ನೇತೃತ್ವ ವಹಿಸಿದ್ದ ನ್ಯಾ.ಚಂದ್ರಚೂಡ ಚಾನೆಲ್ ಗೆ ಸೂಚಿಸಿದ್ದಾರೆ.
ಮಾಧ್ಯಮಗಳಿಗೆ ಪೊಲೀಸ್ ಕಮಿಶನರ್ ಗಳು ಪದೇ ಪದೇ ಸಂದರ್ಶನಗಳನ್ನು ನೀಡುವ ಇತ್ತೀಚಿಗಿನ ಶೈಲಿಯ ಕುರಿತೂ ತಾವು ಆತಂಕಪಡುತ್ತೇವೆ ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಚೂಡ ಹೇಳಿದ್ದಾರೆ.