ತಾಲಿಬಾನ್ ಕುರಿತ ಚರ್ಚೆಗೆ ಕರೆದ ‘ರಿಪಬ್ಲಿಕ್’ ಟಿವಿ : ಅರ್ನಬ್ ಓರ್ವ ಹುಚ್ಚನೆಂದು ಆಹ್ವಾನ ತಿರಸ್ಕರಿಸಿದ ಪಾಕ್ ಪತ್ರಕರ್ತ !

Prasthutha|

ನವದೆಹಲಿ: ಪಾಕಿಸ್ತಾನ ಮೂಲದ ಖ್ಯಾತ ಪತ್ರಕರ್ತರಾದ ನದೀಮ್ ಫಾರೂಕ್ ಪರಾಚ ಅವರನ್ನು ರಿಪಬ್ಲಿಕ್ ಇಂಡಿಯಾ ಟಿವಿ ಆಯೋಜಿಸಿದ್ದ ತಾಲಿಬಾನ್ ಕುರಿತಾಗಿನ ಚರ್ಚಾಕೂಟದಲ್ಲಿ ಭಾಗವಹಿಸುವಂತೆ ಆಹ್ವಾನಿಸಿ ಪೇಚಿಗೆ ಸಿಲುಕಿದ ಘಟನೆ ವರದಿಯಾಗಿದೆ.

- Advertisement -

ರಿಪಬ್ಲಿಕ್ ಟಿವಿ ಕಡೆಯಿಂದ ಬಂದ ವಾಟ್ಸಪ್ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದ ಪರಾಚ ಅವರು, “ಖಂಡಿತವಾಗಿಯೂ ಬರಲ್ಲ, ರಿಪಬ್ಲಿಕ್ ಟಿವಿಯಂತೆ ಅರ್ನಬ್ ಕೂಡಾ ನಾಚಿಕೆಯಿಲ್ಲದ ಓರ್ವ ಹುಚ್ಚ, ದಯವಿಟ್ಟು ಮತ್ತೊಮ್ಮೆ ಕರೆಯಬೇಡಿ” ಎಂದು ಕಡ್ಡಿ ಮುರಿದಂತೆ ಉತ್ತರಿಸಿದ್ದಾರೆ. ಇದರ ಸ್ಕ್ರೀನ್ ಶಾಟ್ ಅನ್ನು ಪರಾಚ ಅವರು ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಸೆಪ್ಟೆಂಬರ್ 25 ರಂದು ನಡೆಯ ಬೇಕಾಗಿದ್ದ ಸಾರ್ಕ್ ಶೃಂಗಸಭೆಯನ್ನು ಭಾರತ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಅರ್ನಾಬ್ ಗೋಸ್ವಾಮಿ ನಿರೂಪಿಸುವ ಚರ್ಚೆಯಲ್ಲಿ ಭಾಗವಹಿಸುವಂತೆ ನದೀಮ್ ಅವರನ್ನು ರಿಪಬ್ಲಿಕ್ ಇಂಡಿಯಾ ಟಿ.ವಿ ಚಾನೆಲಿನ ಸಂಜಯ್ ಎಂಬವರು ವಾಟ್ಸಪ್ ಮೂಲಕ ವಿನಂತಿಸಿದ್ದರು. ಇದಕ್ಕೆ ನದೀಮ್ ಫಾರೂಕ್ ಪರಾಚ ಅವರು ತೀಕ್ಷ್ಣವಾಗಿ ಉತ್ತರಿಸಿದ್ದಾರೆ. ನದೀಮ್ ಅವರ ಪ್ರತಿಕ್ರಿಯೆಯು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

- Advertisement -

ತನ್ನ ಚಾನೆಲಿನಲ್ಲಿ ಪಾಕಿಸ್ತಾನವನ್ನು ಟೀಕಿಸುತ್ತಲೇ ಕಾಲ ಕಳೆಯುವ ಅರ್ನಬ್ ಗೋಸ್ವಾಮಿ ತನ್ನ ಚಾನೆಲಿನ ಚರ್ಚೆಗೆ ಓರ್ವ ಪಾಕ್ ಪತ್ರಕರ್ತನನ್ನು ಆಹ್ವಾನಿಸಿರುವ ನಡೆ, ಕೆಲ ಮಾಧ್ಯಮಗಳ ದ್ವಂದ್ವ ನಿಲುವನ್ನು ಮತ್ತೊಮ್ಮೆ ಬಯಲಾಗಿಸಿದೆ ಎಂದೇ ವ್ಯಾಖ್ಯಾನಿಸಲಾಗಿದೆ.

Join Whatsapp