ಮಹಿಳೆಯರು ಸ್ವತಂತ್ರವಾಗಿ ಬದುಕಲು ಸಾಧ್ಯವಿಲ್ಲವೆಂದಿದ್ದ ಆದಿತ್ಯನಾಥ್ ಗೆ UAE ರಾಜಕುಮಾರಿಯ ಖಡಕ್ ಉತ್ತರ!

Prasthutha|

ಹೊಸದಿಲ್ಲಿ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಹಿಳಾ ವಿರೋಧಿ ಹೇಳಿಕೆಗಳನ್ನು ಯುಎಇ ರಾಜಮನೆತನದ ಸದಸ್ಯೆ ಹಿಂದ್ ಬಿಂತ್ ಫೈಝಲ್ ಅಲ್ ಖಾಸಿಮಿ ಟೀಕಿಸಿದ್ದಾರೆ.
ವರ್ಷಗಳ ಹಿಂದೆ ಯೋಗಿಯ ಮಹಿಳಾ ವಿರೋಧಿ ಹೇಳಿಕೆಗಳ ಬಗ್ಗೆ ಭಾರತೀಯ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಯನ್ನು ಟ್ವಿಟರ್‌ ನಲ್ಲಿ ಹಂಚಿಕೊಳ್ಳುತ್ತಾ UAE ರಾಜಕುಮಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

“ಈ ವ್ಯಕ್ತಿ ಯಾರು? ಆತನಿಗೆ ಹೇಗೆ ಈ ರೀತಿ ಹೇಳಲು ಸಾಧ್ಯ? ಅವನಿಗೆ ಮತ ಹಾಕಿದವರು ಯಾರು? ” ಎಂದು ರಾಜಕುಮಾರಿ ತನ್ನ ಟ್ವಿಟರ್ ಖಾತೆಯಲ್ಲಿ ಕಿಡಿಕಾರಿದ್ದಾರೆ.
‘ಮಹಿಳೆಯರಿಗೆ ಸ್ವತಂತ್ರವಾಗಿ ಬದುಕಲು ಸಾಧ್ಯವಿಲ್ಲ. ಅವರ ಅಹಂಕಾರವನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ಅದು ನಿಷ್ಪ್ರಯೋಜಕ ಮತ್ತು ಅಪಾಯಕಾರಿ’ ಎಂದು ಯೋಗಿ ಹೇಳಿದ್ದರು.


ಈ ಹಿಂದೆ ಹಿಂದ್ ಅಲ್-ಖಾಸಿಮಿ ಯುಎಇಯಲ್ಲಿ ಕೆಲವು ವಲಸಿಗ ಭಾರತೀಯರು ಮಾಡಿದ ಮುಸ್ಲಿಂ ವಿರೋಧಿ ಹೇಳಿಕೆಗಳ ವಿರುದ್ಧವೂ ವಾಗ್ದಾಳಿ ನಡೆಸಿದ್ದರು. ನಮ್ಮ ದೇಶಕ್ಕೆ ಬಂದು ನಮ್ಮ ವಿರುದ್ಧ ಮಾತನಾಡಲು ಎಂದಿಗೂ ಅನುಮತಿಸುವುದಿಲ್ಲ ಎಂದು ಅವರು ಎಚ್ಚರಿಸಿದ್ದರು.

Join Whatsapp