1966ರ ಬಳಿಕ ಇದೇ ಮೊದಲ ಬಾರಿ ದೆಹಲಿಯಲ್ಲಿ ವಿದೇಶಿ ಗಣ್ಯ ಅತಿಥಿ ಇಲ್ಲದೆ ಗಣರಾಜ್ಯೋತ್ಸವ!

Prasthutha|

ನವದೆಹಲಿ : 1966ರ ಬಳಿಕ ಇದೇ ಮೊದಲ ಬಾರಿಗೆ ವಿದೇಶಿ ಗಣ್ಯ ಅತಿಥಿ ಇಲ್ಲದೆ ಭಾರತದ ಗಣರಾಜ್ಯೋತ್ಸವ ಸಮಾರಂಭ ನಡೆಯಲಿದೆ ಎಂದು ವರದಿಯೊಂದು ತಿಳಿಸಿದೆ.

- Advertisement -

ಈ ವರ್ಷದ ಗಣರಾಜ್ಯೋತ್ಸವಕ್ಕೆ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಅವರೂ ಆಹ್ವಾನವನ್ನು ಒಪ್ಪಿಕೊಂಡಿದ್ದರು. ಆದರೆ, ಬ್ರಿಟನ್ ನಲ್ಲಿ ರೂಪಾಂತರಿತ ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಹೀಗಾಗಿ ಅವರು ತಮ್ಮ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಗಣರಾಜ್ಯೋತ್ಸವ ದಿನ ಪರೇಡ್ ನಲ್ಲಿ ಭಾಗವಹಿಸಲು ವಿದೇಶಿ ಗಣ್ಯರನ್ನು ಮೊದಲೇ ಆಹ್ವಾನಿಸಲಾಗಿರುತ್ತದೆ. ತಿಂಗಳುಗಳಿಗೆ ಮೊದಲೇ ಅದು ಅಂತಿಮಗೊಂಡಿರುತ್ತದೆ. ಈ ಬಾರಿ ಅಂದುಕೊಂಡಂತೆ, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾಗವಹಿಸುವುದು ಅಸಾಧ್ಯವಾದರೆ, 1966ರ ಬಳಿಕ ಇದೇ ಮೊದಲ ಬಾರಿ ವಿದೇಶಿ ಗಣ್ಯ ಅತಿಥಿ ಇಲ್ಲದೆ ಗಣರಾಜ್ಯೋತ್ಸವ ನಡೆಯಲಿದೆ ಎಂದು ವರದಿ ತಿಳಿಸಿದೆ.

Join Whatsapp