ನೌಕರರ ಸಮಸ್ಯೆ ಎದುರಿಸುತ್ತಿರುವ ಅಮೆರಿಕ| ಸೆಪ್ಟೆಂಬರ್ ನಲ್ಲಿ ಉದ್ಯೋಗ ಬಿಟ್ಟವರೆಷ್ಟು ಗೊತ್ತೇ?

Prasthutha|

ನ್ಯೂಯಾರ್ಕ್: ಅಮೆರಿಕದಲ್ಲಿ ಉದ್ಯೋಗಿಗಳು ವ್ಯಾಪಕವಾಗಿ ತಮ್ಮ ಕೆಲಸವನ್ನು ತೊರೆಯುತ್ತಿದ್ದಾರೆ ಎಂದು ವರದಿಯಾಗಿದೆ. ಸುಮಾರು 44 ಲಕ್ಷ ಜನರು, ಅಂದರೆ ಅಮೆರಿಕದಲ್ಲಿನ ಒಟ್ಟು ಉದ್ಯೋಗಿಗಳ ಮೂರು ಶೇಕಡಾ ಜನರು ಸೆಪ್ಟೆಂಬರ್‌ ನಲ್ಲಿ ತಮ್ಮ ಕೆಲಸವನ್ನು ತೊರೆದಿದ್ದಾರೆ.

- Advertisement -

US ಡಿಪಾರ್ಟ್ ಮೆಂಟ್ ಆಫ್ ಲೇಬರ್ಸ್ ಬಿಡುಗಡೆಗೊಳಿಸಿದ ‘ಲೇಬಲ್ ಡಿಪಾರ್ಟ್ ಮೆಂಟ್ ಜೋಬ್ ಓಪನಿಂಗ್ ಆಂಡ್ ಲೇಬಲ್ ಟರ್ನೋವರ್ ಸರ್ವೇ’ ಯಲ್ಲಿ ಈ ಅಂಕಿ ಅಂಶ ಬಹಿರಂಗಗೊಂಡಿದೆ.
ಆಗಸ್ಟ್ ನಲ್ಲಿ ಕೇವಲ 164,000 ಜನರು ತಮ್ಮ ಕೆಲಸವನ್ನು ತೊರೆದಿದ್ದಾರೆ. ಕೋವಿಡ್ ನಂತರ ಅಮೆರಿಕದ ಆರ್ಥಿಕತೆಗೆ ಇದೊಂದು ದೊಡ್ಡ ಸವಾಲಾಗಿದೆ.

ಈ ನಡುವೆ ಜಾಹಿರಾತು ನೀಡಿದರೂ ಜನ ಕೆಲಸ ಹುಡುಕಿಕೊಂಡು ಬರುತ್ತಿಲ್ಲ ಎಂದು ಕೆಲವು ಕಂಪನಿಗಳು ಆತಂಕ ವ್ಯಕ್ತಪಡಿಸಿವೆ.

Join Whatsapp