ಅಮೆಜಾನ್ ಪ್ಯಾಂಟ್ರಿ – ಅಮೆಜಾನ್ ಫ್ರೆಶ್ ವಿಲೀನ

Prasthutha: November 13, 2021

ಬೆಂಗಳೂರು: ಅಮೆಜಾನ್ ತನ್ನ ಪ್ಯಾಂಟ್ರಿ  ಸ್ಟೋರನ್ನು ಅಮೆಜಾನ್ ಫ್ರೆಶ್‌ ನೊಂದಿಗೆ ವಿಲೀನ ಮಾಡಿದ್ದು, ಇನ್ನು ಮುಂದೆ ಎಲ್ಲಾ ಬಗೆಯ ಗ್ರಾಸರಿಗಳು ಅಮೆಜಾನ್ ಪ್ರೆಶ್ ಒಂದೇ ಆನ್‌ ಲೈನ್ ಸ್ಟೋರಿನಡಿ ದೊರೆಯಲಿದೆ.

ಹೌದು, ಇದುವರೆಗೂ ಅಮೆಜಾನ್ ಪ್ಯಾಂಟ್ರಿ ಹಾಗೂ ಅಮೆಜಾನ್ ಪ್ರೆಶ್ ಎರಡೂ ಸ್ಟೋರ್‌ ಗಳು ಪ್ರತ್ಯೇಕವಾಗಿ ಕೆಲಸ ನಿರ್ವಹಿಸುತ್ತಿದ್ದವು. ಇದೀಗ ಈ ಎರಡೂ ಸ್ಟೋರ್‌ ಗಳನ್ನು ಅಮೆಜಾನ್ ಫ್ರೆಶ್ ಸ್ಟೋರ್‌ ನಡಿ ವಿನೀಲಗೊಳಿಸಲಾಗಿದೆ. ಇಲ್ಲಿ ಹಣ್ಣು ತರಕಾರಿ, ಮಾಂಸಹಾರ, ಬೆಳೆಕಾಳು, ಸೌಂದರ್ಯ ವರ್ಧಕಗಳು, ವೈಯಕ್ತಿಕ ಆರೈಕೆ ಸೇರಿದಂತೆ ಎಲ್ಲವೂ ಅಮೆಜಾನ್ ಫ್ರೆಶ್ ಆನ್‌ ಲೈನ್‌ನಲ್ಲಿಯೇ ದೊರಕಲಿದೆ. ಪ್ರಸ್ತುತ ಈ ವಿಲೀನವು ಬೆಂಗಳೂರು ಸೇರಿದಂತೆ ಭಾರತದ 300 ನಗರಗಳಲ್ಲಿ ಲಭ್ಯವಿರಲಿದೆ. ಅದರಲ್ಲೂ ಬೆಂಗಳೂರು ಸೇರಿದಂತೆ 14 ಮಹಾನಗರಗಳಲ್ಲಿ ಅಮೆಜಾನ್ ಪ್ರೆಶ್ ಮೂಲಕ ಆ ದಿನವೇ ಡಿಲಿವರಿ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಉಳಿದ ನಗರಗಳು ಎರಡರಿಂದ ಮೂರು ದಿನಗಳ ಅವಧಿಯೊಳಗೆ ನೀವು ಆರ್ಡರ್ ಮಾಡಿದ ವಸ್ತುವು ನಿಮ್ಮ ಮನೆ ತಲುಪಲಿದೆ.

ಕಳೆದ 18 ತಿಂಗಳಿನಿಂದ ಬಹಳಷ್ಟು ಗ್ರಾಹಕರು ಆನ್‌ ಲೈನ್‌ ನಲ್ಲಿಯೇ ಗ್ರಾಸರಿಗಳನ್ನು ಖರೀದಿಸಲು ಆಸ್ತಿ ತೋರುತ್ತಿದ್ದಾರೆ. ಅಮೆಜಾನ್ ಇನ್‌ ನಲ್ಲಿಯೇ ಶೇ.65ರಷ್ಟು ಜನರು ಗ್ರಾಸರಿ ಖರೀದಿಸಿದ್ದಾರೆ. ಅದರಲ್ಲೂ ಶೇ.85ರಷ್ಟು ಹೊಸಬರು ಅಮೆಜಾನ್ ಮೂಲಕ ಖರೀದಿಗೆ ಆಸಕ್ತಿ ತೋರಿರುವುದು ತಿಳಿದು ಬಂದಿದೆ. ಹೀಗಾಗಿ ಗ್ರಾಹಕರಿಗೆ ಇನ್ನಷ್ಟು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅಮೆಜಾನ್ ತನ್ನ ಪ್ಯಾಂಟ್ರಿ ಹಾಗೂ ಅಮೆಜಾನ್ ಫ್ರೆಶ್ ಎರಡನ್ನೂ ವಿಲೀನ ಮಾಡಲು ಯೋಜಿಸಿ, ಅದನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಪತ್ರಿಕಾ ಪ್ರಕರಣೆಯಲ್ಲಿ ತಿಳಿಸಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!