ನಾವು ಮಾತಾನಾಡಿದರೆ ಪಕ್ಷವಿರೋಧಿ, ಅವರಾದರೆ ಪಕ್ಷ ಸಂಘಟನೆ: ಪರೋಕ್ಷವಾಗಿ ಬಿಎಲ್ ಸಂತೋಷ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

Prasthutha|

ದಾವಣಗೆರೆ: ನಾವು ಮಾತನಾಡಿದರೆ ಪಕ್ಷವಿರೋಧಿ, ಅವರು ಮಾತನಾಡಿದ್ರೆ ಪಕ್ಷ ಸಂಘಟನೆ. ಎಂಎಲ್ಸಿ ಹಾಗೂ ರಾಜ್ಯಸಭಾ ಸ್ಥಾನ ಅವರು ಹೇಳಿದವರಿಗೆ ನೀಡುತ್ತಾರೆ. ಅವರ ಒಳ ಹೊಡೆತಗಳು ಹೇಳತೀರದು ಎಂದು ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ಪರೋಕ್ಷವಾಗಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದರು.

- Advertisement -


ದಾವಣಗೆರೆಯಲ್ಲಿ ಮಾತನಾಡಿದ ಅವರು, ಓಡಾಟ ನನಗೆ ಹೊಸದಲ್ಲ, ರಾಜ್ಯಾದ್ಯಂತ ನಾನು ಪ್ರವಾಸ ಮಾಡುತ್ತಿದ್ದೇನೆ ಎಂದು ಹೇಳಿದರು.


ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಕುರಿತಾದ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡೋಣ. ಒಟ್ಟಾರೆ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು ಎಂದು ಹೇಳಿದರು.

Join Whatsapp