ದ್ವೇಷ-ಅಸೂಯೆ ಅಳಿದು, ಸೌಹಾರ್ದತೆಗಳು ವಿಜೃಂಭಿಸಲಿ: ಸಿಎಂ, ಡಿಸಿಎಂ ಶುಭ ಹಾರೈಕೆ

Prasthutha|

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಾಡಿನ ಜನತೆಗೆ ವಿಜಯದಶಮಿ ಶುಭಾಶಯ ಕೋರಿದ್ದಾರೆ.

- Advertisement -


ಈ ಕುರಿತು ಟ್ವಿಟ್ಚರ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ, ಅಧರ್ಮದ ವಿರುದ್ಧ ಧರ್ಮವು ಜಯಿಸಿದ ಈ ವಿಜಯದಶಮಿಯ ದಿನದಂದು ನಮ್ಮ ನಡುವಿನ ದ್ವೇಷ, ಅಸೂಯೆ, ಅಸತ್ಯಗಳು ಅಳಿದು, ಸತ್ಯ, ಪ್ರೀತಿ, ಸೌಹಾರ್ದತೆಗಳು ವಿಜೃಂಭಿಸಲಿ ಎಂದು ಹಾರೈಸುತ್ತೇನೆ. ಕರುನಾಡು ಸುಖ, ಸಮೃದ್ಧಿಯನ್ನೊಳಗೊಂಡ ಸರ್ವಜನಾಂಗದ ಶಾಂತಿಯ ತೋಟವಾಗಲಿ ಎಂದು ಆಶಿಸುತ್ತಾ, ನಾಡಬಂಧುಗಳಿಗೆ ವಿಜಯದಶಮಿಯ ಶುಭ ಕೋರುತ್ತೇನೆ ಎಂದು ಬರೆದುಕೊಂಡಿದ್ದಾರೆ.


ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪೋಸ್ಟ್ ಮಾಡಿದ್ದು, ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಡದೇವತೆ ತಾಯಿ ಶ್ರೀ ಚಾಮುಂಡೇಶ್ವರಿಯ ಅನುಗ್ರಹದಿಂದ ನಾಡಿನೆಲ್ಲೆಡೆ ಸುಖ, ಶಾಂತಿ, ನೆಮ್ಮದಿ ನೆಲೆಸಲಿ ಹಾಗೂ ಒಳ್ಳೆ ಮಳೆ-ಬೆಳೆಯಿಂದ ರೈತರ ಬಾಳು ಹಸನಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.