ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಿರಿ: ‘ಮುಖ್ಯಮಂತ್ರಿ’ ಚಂದ್ರು

Prasthutha|

ಮೈಸೂರು: ಈ ದೇಶದ ಬಹುತ್ವ ಉಳಿಸಿಕೊಳ್ಳಲು, ಭ್ರಷ್ಟಾಚಾರ ನಿಲ್ಲಲು, ಬೆಲೆಯೇರಿಕೆ ತಡೆಯಲು ಬಿಜೆಪಿ ಸರ್ಕಾರವನ್ನು ಜನರು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಮನವಿ ಮಾಡಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಲ್ಕಿಸ್ ಬಾನು ಎಂಬ ಗರ್ಭಿಣಿಯ ಅತ್ಯಾಚಾರ ಪ್ರಕರಣ ಪ್ರಸ್ತಾಸಪಿಸಿದ ಅವರು, ಅಂತಹ ದುಷ್ಟರಿಗೆ ಕ್ಷಮಾದಾನ ಕೊಡಿಸಿದ್ದ ಬಿಜೆಪಿ, ರಾಜ್ಯದಲ್ಲಿ ತಾನು ಮಹಿಳೆಯ ರಕ್ಷಕ ಎಂಬಂತೆ ಹಾರಾಡುತ್ತಿದೆ. ನೋಟು ಅಮಾನ್ಯೀಕರಣ, ಚುನಾವಣೆ ಬಾಂಡ್ ಹಗರಣ ಮೂಲಕ ದೇಶವನ್ನೇ ಸಂಕಷ್ಟಕ್ಕೆ ದೂಡಿ ಲೀಗಲ್ ಭ್ರಷ್ಟಾಚಾರ ನಡೆಸಿದೆ ಎಂದು ದೂರಿದರು.

ದೆಹಲಿ‌ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಲ್ಲಿರಿಸಿ, ಮಧುಮೇಹ ಸಮಸ್ಯೆಗೆ ಇನ್ಸುಲಿನ್ ಕೂಡ ನೀಡದೇ ಶೋಷಿಸಲಾಗುತ್ತಿದೆ. ಇಂಥ ರಾಕ್ಷಸ ಪ್ರವೃತ್ತಿಯ ಪ್ರಧಾನಮಂತ್ರಿ ಮತ್ತು ಗೃಹಮಂತ್ರಿ ಇರಬೇಕೇ ಅಥವಾ ಬೇಡವೇ ಎಂದು ತೀರ್ಮಾನಿಸುವ ತುರ್ತು ಈ ಚುನಾವಣೆ’ ಎಂದರು.

- Advertisement -

ಯದುವೀರ್ ಒಡೆಯರ್ ಅವರು ತಮ್ಮ ರಾಜಸ್ಥಾನದ ಮಾವನ ಸಮಸ್ಯೆಗೋ ಅಥವಾ ಇಲ್ಲಿನ ಆಸ್ತಿ ವ್ಯಾಜ್ಯದ ಒತ್ತಡಕ್ಕೋ ಅಭ್ಯರ್ಥಿಯಾಗಿ ಇಳಿದಿದ್ದಾರೆ ಎನ್ನಿಸುತ್ತದೆ. ಇವರಿಂದ ಜಿಲ್ಲೆಯ ಜನ ಹೆಚ್ಚು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಸಾಮಾನ್ಯ ಅಭ್ಯರ್ಥಿ, ಜನರ ಕಷ್ಟಕ್ಕೆ ಸ್ಪಂದಿಸುವ ಎಂ.ಲಕ್ಷ್ಮಣ ಅವರನ್ನು ಗೆಲ್ಲಿಸಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಜನರು ಬಲ ನೀಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಆಮ್ ಅದ್ಮಿ‌ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಮಾಲವಿಕ ಗುಬ್ಬಿವಾಣಿ, ಸೋಸಲೆ ಸಿದ್ದರಾಜು, ಜಿಲ್ಲಾ ಘಟಕದ ಅಧ್ಯಕ್ಷ ಎಲ್.ರಂಗಯ್ಯ ಇದ್ದರು.



Join Whatsapp