ಅಮೆರಿಕದಲ್ಲಿ ವಿದ್ಯಾರ್ಥಿಗಳಿಂದ ಪ್ಯಾಲೆಸ್ತೀನ್ ಪರ ಪ್ರತಿಭಟನೆ

Prasthutha|

ಅಮೆರಿಕ: ದೇಶವು ಇಸ್ರೇಲ್‍ನಿಂದ ದೂರವಿರಬೇಕು ಎಂದು ಅಮೆರಿಕ ಸರಕಾರವನ್ನು ಒತ್ತಾಯಿಸಿ ಮತ್ತು ಗಾಝಾದಲ್ಲಿ ತಕ್ಷಣ ಕದನ ವಿರಾಮ ಜಾರಿಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರೆದಿದೆ.

- Advertisement -

ಯೇಲ್ ವಿವಿ, ಮಸಚುಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನ್ಯೂಯಾರ್ಕ್ ವಿವಿ, ಬರ್ಕ್‍ಲೆ ವಿವಿ, ಮಿಚಿಗನ್ ವಿವಿಗಳಲ್ಲಿ ವಿದ್ಯಾರ್ಥಿಗಳು ವಿವಿಯ ಕಟ್ಟಡವನ್ನು ಆಕ್ರಮಿಸಿಕೊಂಡು ರ‍್ಯಾಲಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಈ ಮಧ್ಯೆ ಕೊಲಂಬಿಯಾ ವಿವಿ ವಿದ್ಯಾರ್ಥಿಗಳ ಜತೆಗೆ ಆಡಳಿತ ಮಂಡಳಿ ನಡೆಸಿದ ಸಂಧಾನ ಮಾತುಕತೆ ವಿಫಲವಾಗಿರುವುದರಿಂದ ಕ್ಯಾಂಪಸ್ ಅನ್ನು ಮುಚ್ಚಿ ಆನ್‍ಲೈನ್ ಮೂಲಕ ತರಗತಿ ನಡೆಸುವುದಾಗಿ ಆಡಳಿತ ಮಂಡಳಿ ಘೋಷಿಸಿದೆ. ನ್ಯೂಯಾರ್ಕ್ ವಿವಿಯಲ್ಲಿ ಪೊಲೀಸರತ್ತ ಬಾಟಲಿಗಳನ್ನು ಎಸೆದ ಆರೋಪದಲ್ಲಿ 133 ಪ್ರತಿಭಟನಕಾರರನ್ನು ಬಂಧಿಸಲಾಗಿದ್ದು, ನ್ಯಾಯಾಲಯದಲ್ಲಿ ಹಾಜರಾಗುವಂತೆ ಸೂಚಿಸಿ ಜಾಮೀನು ನೀಡಿ ಬಿಡುಗಡೆಗೊಳಿಸಲಾಗಿದೆ. ಯೇಲ್ ವಿವಿಯ ಆವರಣದಲ್ಲಿ ಪ್ರತಿಭಟನಕಾರರು ಸ್ಥಾಪಿಸಿರುವ ಶಿಬಿರವನ್ನು ತೆರವುಗೊಳಿಸುವಂತೆ ಆಡಳಿತ ವರ್ಗ ನೀಡಿದ್ದ ಸೂಚನೆಯನ್ನು ಮಾನ್ಯ ಮಾಡದ ಹಿನ್ನೆಲೆಯಲ್ಲಿ ಪೊಲೀಸರ ಸಹಾಯದಿಂದ ಶಿಬಿರಗಳನ್ನು ತೆರವುಗೊಳಿಸಲಾಗಿದೆ. 47 ವಿದ್ಯಾರ್ಥಿಗಳ ಸಹಿತ ಸುಮಾರು 60 ಪ್ರತಿಭಟನಕಾರರನ್ನು ಬಂಧಿಸಿರುವುದಾಗಿ ವರದಿಯಾಗಿದೆ.

Join Whatsapp