ಹೆಡ್ಗೆವಾರ್ ಸ್ಮಾರಕದೊಳಗೆ ನಾನು ಹೋಗಿದ್ದ ವಿಡಿಯೋ ರಿಲೀಸ್ ಮಾಡಿ: ಬಿಜೆಪಿಗೆ ಗೂಳಿಹಟ್ಟಿ ಸವಾಲ್

Prasthutha|

ಚಿತ್ರದುರ್ಗ: ಹೆಡ್ಗೆವಾರ್ ಸ್ಮಾರಕದೊಳಗೆ ನಾನು ಹೋಗಿದ್ದ ವಿಡಿಯೋ ರಿಲೀಸ್ ಮಾಡಿ ಎಂದು ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಸವಾಲು ಹಾಕಿದ್ದಾರೆ.

- Advertisement -

ಆರ್ ಎಸ್ ಎಸ್ ಸಂಸ್ಥಾಪಕ ಹೆಡಗೇವಾರ್ ಅವರ ಮ್ಯೂಸಿಯಂ ಪ್ರವೇಶಕ್ಕೆ ದಲಿತ ಅನ್ನುವ ಕಾರಣಕ್ಕೆ ನನ್ನನ್ನು ನಿರಾಕರಿಸಿದ್ದಾರೆ ಎಂದು ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದರು. ಇದಕ್ಕೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಈಗ ಮತ್ತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೆಡ್ಗೆವಾರ್ ಸ್ಮಾರಕದೊಳಗೆ ನಾನು ಹೋಗಿದ್ದ ವಿಡಿಯೋ ರಿಲೀಸ್ ಮಾಡಿ ಎಂದು ಸವಾಲು ಹಾಕಿದ್ದಾರೆ. ವಿಡಿಯೋ ರಿಲೀಸ್ ಮಾಡಿದರೆ ನಿಮ್ಮ ಮನೆಗಳಲ್ಲಿ ಕಸ ಗುಡಿಸುವ ಕೆಲಸ ಮಾಡಿಕೊಂಡಿರುತ್ತೇನೆ ಎಂದಿದ್ದಾರೆ. ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಮಾಡಿದ್ದ ಆರೋಪಕ್ಕೆ ಬಿಜೆಪಿ ನಾಯಕರು ನೀಡಿದ್ದ ಆಕ್ಷೇಪದ ಹೇಳಿಕೆಗಳಿಗೆ ಆಡಿಯೋ ಮೂಲಕ ತಿರುಗೇಟು ನೀಡಿದ್ದಾರೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಮಾಜಿ ಶಾಸಕ ಪಿ ರಾಜೀವ್, ಚಲವಾದಿ ನಾರಾಯಣಸ್ವಾಮಿ, ಮತ್ತು ಸುರೇಶ್ ಕುಮಾರ್ಗೆ ವಾಟ್ಸಾಪ್ ಆಡಿಯೋ ಮೂಲಕ ಸವಾಲು ಹಾಕಿದ್ದಾರೆ.

- Advertisement -

ಸಿಸಿ ಕ್ಯಾಮರಾ ದೃಶ್ಯ ಇರುತ್ತೆ ಅಲ್ವಾ ರಿಲೀಸ್ ಮಾಡಿ. ರಿಲೀಸ್ ಮಾಡಿದ್ರೆ ನಿಮ್ಮ ಮನೆ ಗೇಟ್ ಕೀಪರ್ ಆಗಿ ಕೆಲಸ ಮಾಡ್ತೇನೆ. ಕೆಲವು ತಿಂಗಳ ಹಿಂದೆ ನಾನು ಈ ವಿಷಯವನ್ನು ಹೇಳಿದ್ದರೆ ಇನ್ನಷ್ಟು ಸೀಟ್ ಕಳೆದುಕೊಳ್ತಿದ್ದರು ಎಂದು ಆಡಿಯೋ ಸಂದೇಶ ಮೂಲಕ ಟಾಂಗ್ ಕೊಟ್ಟಿದ್ದಾರೆ.



Join Whatsapp