ಯುಎಇ: ಶೈಖ್ ಸಊದ್ ಅವರ ಆದೇಶದ ಮೇರೆಗೆ ಬಕ್ರೀದ್ ಪ್ರಯುಕ್ತ ರಾಸ್-ಅಲ್-ಖೈಮಾದಲ್ಲಿ ವಿವಿಧ ದೇಶಗಳ 174 ಕೈದಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಸ್-ಅಲ್-ಖೈಮಾ ರಾಜಕುಮಾರ ಮತ್ತು ನ್ಯಾಯಾಂಗ ಮಂಡಳಿಯ ಚೇರ್ಮೆನ್ ಶೈಖ್ ಮುಹಮ್ಮದ್ ಬಿನ್ ಸೌದ್ ಹಾಗೂ ಪೊಲೀಸರು ನಡೆಸಿದ ಖೈದಿಗಳ ನಡವಳಿಕೆಯ ಮೌಲ್ಯಮಾಪನವನ್ನು ಆಧರಿಸಿ ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಬಿಡುಗಡೆಗೊಂಡ ಖೈದಿಗಳು ಕುಟುಂಬ ಮತ್ತು ಸಮುದಾಯಕ್ಕೆ ಮಾದರೀ ಜೀವನವನ್ನು ನಡೆಸಲಿ ಎಂದು ಅಧಿಕಾರಿಗಳು ಹಾರೈಸಿದ್ದಾರೆ.