ಹೊಸದಿಲ್ಲಿ: ಆಸ್ತಿ ವಿಚಾರವಾಗಿ ಸಂಬಂಧಿಕರ ನಡುವೆ ಜಗಳ ನಡೆದಿದ್ದು, ಎರಡು ಗುಂಪುಗಳು ಪರಸ್ಪರ ದೊಣ್ಣೆಗಳಿಂದ ಹೊಡೆದುಕೊಂಡ ಘಟನೆ ಈಶಾನ್ಯ ದೆಹಲಿಯ ಉಸ್ಮಾನ್ಪುರದಲ್ಲಿ ನಡೆದಿದೆ. ಪ್ರತ್ಯಕ್ಷದರ್ಶಿಗಳು ನೋಡುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗಿದೆ.
ಈ ಬಗ್ಗೆ ಕರೆ ಬಂದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಜಗಳವನ್ನು ಬಿಡಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ವೈರಲ್ ಆಗಿರುವ ಘರ್ಷಣೆಯ ವೀಡಿಯೊಗಳಿಂದ ಪೊಲೀಸರು ಆರೋಪಿಗಳನ್ನು ಗುರುತಿಸಿದ್ದು ಅವರಲ್ಲಿ ಒಬ್ಬನನ್ನು ಬಂಧಿಸಲಾಗಿದೆ
ಶ್ಯಾಮವೀರ್ ,ಜಗತ್ ಮತ್ತು ಅವರ ಮಕ್ಕಳ ನಡುವೆ ಜಗಳ ನಡೆದಿದ್ದು,ಎರಡೂ ಕಡೆ ಹಳೆಯ ಆಸ್ತಿ ವಿವಾದಗಳಿದ್ದು, ಈ ಹಿಂದೆ ಪರಸ್ಪರ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು. ಜಗತ್ ಮತ್ತು ಇತರರು ಶ್ಯಾಮವೀರ್ ಮತ್ತು ಆತನ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಆರೋಪಿಗಳು ತಾವು ವಕೀಲರು ಮತ್ತು ಬಿಜೆಪಿಯವರು ಎಂದು ಪೊಲೀಸರಿಗೆ ಬೆದರಿಸಿದ್ದು, ಬಿಜೆಪಿ ಪದಾಧಿಕಾರಿಗಳು ಮತ್ತು ಬಾರ್ ಕೌನ್ಸಿಲ್ಗೆ ವಿಷಯ ತಿಳಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.