ಹೊಸ ವರ್ಷದಿಂದ 10 ವರ್ಷಕ್ಕಿಂತ ಹಳೆಯ ಎಲ್ಲಾ ಡೀಸೆಲ್ ವಾಹನದ ರಿಜಿಸ್ಟ್ರೇಶನ್ ಕ್ಯಾನ್ಸಲ್!

Prasthutha|

ನವದೆಹಲಿ : ಮಾಲಿನ್ಯ ನಿಯಂತ್ರಣ ಮಾಡದ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ಈಗಾಗಲೇ ಸುಪ್ರೀಂ ಕೋರ್ಟ್ ಚೀಮಾರಿ ಹಾಕಿದೆ. ಇದಾದ ಬಳಿಕ ದೆಹಲಿ ಸರ್ಕಾರ ಮತ್ತಷ್ಟು ಕಠಿಣ ನಿಯಮ ಜಾರಿಗೆ ಮುಂದಾಗಿದೆ. ಇತ್ತ ರಾಷ್ಟ್ರೀಯ ಹಸಿರು ಮಂಡಳಿ ನಿರ್ದೇಶನದ ಪ್ರಕಾರ 10 ವರ್ಷಕ್ಕಿಂತ ಹಳೇಯ ಎಲ್ಲಾ ಡೀಸೆಲ್ ವಾಹನದ ರಿಜಿಸ್ಟ್ರೇಶನ್ ರದ್ದು ಮಾಡಲು ದೆಹಲಿ ಸರ್ಕಾರ ಮುಂದಾಗಿದೆ. ಜನವರಿ 1 , 2022ರಿಂದ 10 ವರ್ಷ ಹಳೆಯ ಡೀಸೆಲ್ ವಾಹನದ ನೋಂದಣಿ ರದ್ದು ಮಾಡಲಾಗುತ್ತಿದೆ.

- Advertisement -

ಜನವರಿ 1, 2022ರಿಂದ ಹಳೇ ಡೀಸೆಲ್ ವಾಹನ, ಅಂದರೆ 10 ವರ್ಷಕ್ಕಿಂತ ಹಳೇಯ ವಾಹನವನ್ನು ರಸ್ತೆಗಿಳಿಸಿದರೆ ದಂಡ ಖಚಿತ. ಇನ್ನೂ ಹಳೇಯ ವಾಹನವನ್ನು ರಸ್ತೆಗಳಿಸಲೇಬೇಕು ಎಂದರೆ ಒಂದು ಅವಕಾಶವಿದೆ. ಹಸಿರು ನ್ಯಾಯ ಮ ಮಂಡಳಿಯಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು(NOC) ಪಡೆದಿರಬೇಕು. ಹಾಗಂತ ಹೆಚ್ಚು ಖುಷಿ ಪಡಬೇಕಿಲ್ಲ. ಕಾರಣ NOC ಪಡೆಯುವುದು ಈ ಹಿಂದಿನಷ್ಟು ಸುಲಭವಲ್ಲ. ಇಷ್ಟೇ ಅಲ್ಲ 15 ವರ್ಷಕ್ಕಿಂತ ಹಳೇಯ ಡೀಸೆಲ್ ವಾಹನಕ್ಕೆ NOC ಕೂಡ ಸಿಗುವುದಿಲ್ಲ. ಹೀಗಾಗಿ ಗುಜುರಿಗೆ ಹಾಕಲೇಬೇಕು

2016 ರಲ್ಲಿ NGT ದೆಹಲಿ ಹಾಗೂ ರಾಷ್ಟ್ರರಾಜಧಾನಿ ವಲಯದಲ್ಲಿ 10 ವರ್ಷಕ್ಕಿಂತ ಹಳೆಯ ಡೀಸೆಲೆ್ ವಾಹನ ಹಾಗೂ 15 ವರ್ಷಕ್ಕಿಂತ ಹಳೇಯ ಪೆಟ್ರೋಲ್ ವಾಹನದ ರಿಜಿಸ್ಟ್ರೇಶನ್ ರದ್ದು ಮಾಡಲು ನಿರ್ದೇಶಿಸಿತ್ತು. ಆದರೆ ಈ ನಿರ್ದೇಶವನ್ನು ದೆಹಲಿ ಸರ್ಕಾರ ಇದೀಗ ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿದೆ. ಹೊಸ ವರ್ಷದ ಮೊದಲ ದಿನವೇ ಹಳೇ ವಾಹನ ಮಾಲೀಕರಿಗೆ ಶಾಕ್ ಶಾಕ್ ಮೇಲೆ ಕಾದಿದೆ. ಸರ್ಕಾರ ಜನವರಿ 1, 2022ಕ್ಕೆ 10 ವರ್ಷ ಪೂರೈಸುವ ಹಾಗೂ ಅದಕ್ಕಿಂತ ಹೆಚ್ಚಿನ ವರ್ಷಗಳ ಹಳೇಯ ಡೀಸೆಲ್ ವಾಹನಗಳ ನೋಂದಣಿ ರದ್ದಾಗಲಿದೆ ಎಂದು ತಿಳಿದು ಬಂದಿದೆ.

Join Whatsapp