ಕಾರವಾನ್ ಇಂಗ್ಲಿಷ್ ಪತ್ರಿಕೆಯು ಒಂದು ತನಿಖಾ ವರದಿ ಪ್ರಕಟಿಸಿದ್ದು ಮೋದಿಯವರ ಜನ್ಮ ದಿನ ಸೆಪ್ಟೆಂಬರ್ 17ರಂದು 2.5 ಕೋಟಿ ಡೋಸ್ ಲಸಿಕೆ ನೀಡಿರುವ ದಾಖಲೆ ನಕಲಿ ಸೃಷ್ಟಿ ಆಗಿದೆ ಎಂದು ಸಮಗ್ರ ಆಧಾರಗಳ ಸಮೇತ ಬರೆದಿದೆ.
ಮಧ್ಯ ಪ್ರದೇಶದ ಪ್ರಣವ್ ನರ್ವಾರೆ ಎಂಬವರ ತಾಯಿ ಸೆಪ್ಟೆಂಬರ್ 15ರಂದು ಎರಡನೆಯ ಡೋಸ್ ಲಸಿಕೆ ಪಡೆದರು. ಅದರ ದಾಖಲಾತಿಗೆ 17ರವರೆಗೆ ಕಾಯಿರಿ ಎಂದಿದ್ದಾರೆ. ಅನಂತರ ಮೋದಿ ಜನ್ಮ ದಿನದ ಸಾಧನೆಗೆ ಎರಡು ದಿನ ಮೊದಲು ಲಸಿಕೆ ನೀಡಿದ್ದು ಸಹ ಸೇರಿದೆ.
ಹೀಗೆ ಭಾರತದ ಕೋವಿಡ್ ಪೋರ್ಟಲ್ಗೆ ಮೂರು ದಿನಗಳ, ಕೆಲವೆಡೆ ಇನ್ನೂ ಹೆಚ್ಚು ದಿನಗಳ ಲಸಿಕೆ ನೀಡಿಕೆ ಲೆಕ್ಕವನ್ನು ಸೆಪ್ಟೆಂಬರ್ 17ರಂದು ಸೇರಿಸಿ ನಕಲಿ ದಾಖಲೆ ಗುಲ್ಲು ಎಬ್ಬಿಸಲಾಗಿದೆ ಎಂದು ಕಾರವಾನ್ ತನಿಖಾ ವರದಿಯಲ್ಲಿ ಸಮಗ್ರವಾಗಿ ವಿವರಿಸಲಾಗಿದೆ.