ಯೋಗೀಶ್ವರ್, ಬೆಲ್ಲದ್ ವಿಜಯೇಂದ್ರರಿಗಿಲ್ಲ ಸಂಪುಟದಲ್ಲಿ ಅವಕಾಶ : ಭುಗಿಲೇಳುತ್ತಾ ಬಂಡಾಯದ ಬಾವುಟ?

Prasthutha|

ಬಸವರಾಜ ಬೊಮ್ಮಾಯಿಯವರು ಅಧಿಕಾರ ಸ್ವೀಕರಿಸಿದ ದಿನದಿಂದ ದೆಹಲಿಗೆ ವರಿಷ್ಟರ ಅಣತಿಯಂತೆ ಕಾರ್ಯನಿರ್ವಹಿಸುತ್ತಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಮುಖ್ಯಮಂತ್ರಿಯವರ ಇಂದಿನ ಪತ್ರಿಕಾಗೋಷ್ಠಿಯ ನಂತರ ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರುವ ಲಕ್ಷಣ ಸ್ಪಷ್ಟವಾಗಿ ಕಾಣಿಸುತ್ತಿದೆ. ಮಾಜಿ ಸಚಿವರಾದಂತಹಾ ಯೋಗೀಶ್ವರ್ ಮತ್ತು ಅರವಿಂದ್ ಬೆಲ್ಲದ್ ಅವರಿಗೆ ಈ ಬಾರಿಯ ನೂತನ ಸಂಪುಟದಲ್ಲಿ ಸ್ಥಾನ ನೀಡಿಲ್ಲ.ಅದೇ ರೀತಿ ಯಡಿಯೂರಪ್ಪನವರ ರಾಜೀನಾಮೆಯ ಬಳಿಕ ಮಗ ವಿಜಯೇಂದ್ರ ಅವರಿಗೆ ಸ್ಥಾನ ನೀಡಲಾಗುತ್ತದೆ ಎಂಬ ನಿರೀಕ್ಷೆಯೂ ಸುಳ್ಳಾಗಿದೆ. ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ನೀಡುವುದಿಲ್ಲವೆಂದು ದೆಹಲಿ ವರಿಷ್ಟರು ತೀರ್ಮಾನಿಸಿದ್ದಾರೆ ಎಂದು ಬೊಮ್ಮಾಯಿ ಪತ್ರಿಕಾಗೋಷ್ಠಿಯಲ್ಲೇ ತಿಳಿಸಿದ್ದಾರೆ.

- Advertisement -


ಹೀಗಾಗಿ ಬೊಮ್ಮಾಯಿ ಸರಕಾರದ ವಿರುದ್ಧ ಅಸಮಾಧಾನ ಈಗಲೇ ಭುಗಿಲೆದ್ದಿದೆ. ಶಾಸಕರ ಭವನದ ಎದುರು ಹಲವು ಶಾಸಕರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಉಪಮುಖ್ಯಮಂತ್ರಿ ಹುದ್ದೆಯನ್ನೇ ಕೈಬಿಟ್ಟು ಹಲವು ಹಿರಿಯ ನಾಯಕರ ಲಾಬಿಗೂ ಹೈಕಮಾಂಡ್ ತಡೆಯೊಡ್ಡಿದೆ. ಕಳೆದೆರಡು ವರ್ಷಗಳಿಂದ ಅಧಿಕಾರವುಳಿಸಿಕೊಳ್ಳಲು ಮಾತ್ರ ಹೆಣಗಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರಂತೆಯೇ ಬೊಮ್ಮಾಯಿಯವರು ಕೂಡಾ ಅಭಿವೃದ್ಧಿಗೆ ಮುಂದಾಗದೆ, ರಾಜ್ಯದ ಜನತೆಯ ಸಂಕಷ್ಟಗಳಿಗೆ ಬೆನ್ನು ಹಾಕುತ್ತಾರೋ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ರಾಜ್ಯದ ಆಡಳಿತ ಯಂತ್ರ ಡೊಲಾಯಮಾನ ಸ್ಥಿತಿಯಲ್ಲಿದೆ ಎಂದೇ ರಾಜಕೀಯ ವಿಮರ್ಶಕರು ಅಭಿಪ್ರಾಯಿಸಿದ್ದಾರೆ

Join Whatsapp