ಪ್ರೀತಿಸಲು ನಿರಾಕರಿಸಿದ ಸಹದ್ಯೋಗಿ ಮೇಲೆ ಮ್ಯಾನೇಜರ್ ಹಲ್ಲೆ

Prasthutha|

ಬೆಂಗಳೂರು,ಆ.4: ಪ್ರೀತಿಸಲು ನಿರಾಕರಿಸಿದ ಸಹದ್ಯೋಗಿ ಮೇಲೆ ಮ್ಯಾನೇಜರ್ ಹಲ್ಲೆ ಮಾಡಿರುವ ಘಟನೆ ಬಸವನಗುಡಿಯ ರಾಮಕೃಷ್ಣ ಆಶ್ರಮ ರಸ್ತೆಯಲ್ಲಿರುವ ಪಿಜ್ಜಾ ಹಟ್ ನಲ್ಲಿ ನಡೆದಿದೆ.

- Advertisement -

ಪಿಜ್ಜಾ ಹಟ್ ಮ್ಯಾನೇಜರ್ ಸಂತ್ರಸ್ತೆಯನ್ನು ಪ್ರೀತಿ ಮಾಡುವಂತೆ ಪೀಡಿಸಿದ್ದು, ಯುವತಿ ನಿರಾಕರಿಸಿದಾಗ ಕೋಪಗೊಂಡ ಮ್ಯಾನೇಜರ್ ಆಕೆಯ ಮೊಬೈಲ್ ಚೆಕ್ ಮಾಡಿ ಮನಬಂದಂತೆ ಕಪಾಳಕ್ಕೆ ಭಾರಿಸಿದ್ದಾನೆ.

ಹೊಡೆದ ರಭಸಕ್ಕೆ ಯುವತಿ ನೆಲಕ್ಕೆ ಉರುಳಿಬಿದ್ದಿದ್ದು, ಸ್ಥಳದಲ್ಲಿದ್ದ ಮತ್ತೋರ್ವ ಸಿಬ್ಬಂದಿ ಆಕೆಯ ಸಹಾಯಕ್ಕೆ ಮುಂದಾಗಿದ್ದಾನೆ.

- Advertisement -

ಕೆಲಸ ಹೋಗುವ ಭಯದಲ್ಲಿ ಯುವತಿ ಯಾವುದೇ ದೂರು ದಾಖಲಿಸಿಲ್ಲ. ಆದರೆ ಮ್ಯಾನೇಜರ್ ಯವತಿ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

Join Whatsapp