ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಸುಳಿವು ನೀಡಿದ ಪಂಜಾಬ್ ಕಾಂಗ್ರೆಸ್

Prasthutha|

ಚಂಡೀಗಢ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪಂಜಾಬ್ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಸುಳಿವು ನೀಡಿದೆ.
ಒಬ್ಬ ಸಿಎಂ ಹೇಗಿರಬೇಕು ಎಂದು ಬಾಲಿವುಡ್ ನಟ ಸೋನು ಸೂದ್ ಮಾತನಾಡಿರುವ ವಿಡಿಯೋವನ್ನು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯ ಸುಳಿವು ನೀಡಿದೆ.

- Advertisement -

ನಿಜವಾದ ಸಿಎಂ ಬಲವಂತವಾಗಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳ್ಳಿರಿಸಲ್ಪಟ್ಟವರಾಗಿದ್ದಾರೆ. ಅವರು ಸಿಎಂ ಕುರ್ಚಿಗಾಗಿ ಲಾಬಿ ನಡೆಸುವುದಿಲ್ಲ. ತನಗೆ ಮುಖ್ಯಮಂತ್ರಿಯಾಗಲು ಅರ್ಹತೆ ಇರುವುದಾಗಲೀ ಹೇಳಿಕೊಳ್ಳುವುದಿಲ್ಲ…” ಎಂದು ಸೋನು ವಿಡಿಯೋದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಟ್ವೀಟ್ ಮಾಡಿದ ಸೋನು ಅವರ ವೀಡಿಯೊದಲ್ಲಿ CM ಚರಂಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಸೂಚನೆ ನೀಡಲಾಗಿದೆ. ಪಂಜಾಬ್ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋವನ್ನು ಟ್ವೀಟ್ ಮಾಡಿರುವುದರಿಂದ ಚನ್ನಿ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಸ್ಪಷ್ಟ ಸೂಚನೆಗಳನ್ನು ನೀಡಿದಂತಾಗಿದೆ.

Join Whatsapp