ಲಂಡನ್‌ನಲ್ಲಿ ‘ಗವರ್ನರ್ ಆಫ್ ದಿ ಇಯರ್’ ಪ್ರಶಸ್ತಿ ಸ್ವೀಕರಿಸಿದ RBI ಗವರ್ನರ್ ಶಕ್ತಿಕಾಂತ ದಾಸ್

Prasthutha|

ಲಂಡನ್: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಗವರ್ನರ್ ಶಕ್ತಿಕಾಂತ ದಾಸ್ ಅವರು ಲಂಡನ್‌ನ ಸೆಂಟ್ರಲ್ ಬ್ಯಾಂಕಿಂಗ್ ಅವಾರ್ಡ್ಸ್ 2023 ರಲ್ಲಿ ‘ವರ್ಷದ ಗವರ್ನರ್’ (Governor of the Year) ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. 

- Advertisement -

ಸೆಂಟ್ರಲ್ ಬ್ಯಾಂಕಿಂಗ್ ಅವಾರ್ಡ್ಸ್ 2023 ಪ್ರಶಸ್ತಿ ವಿಜೇತರನ್ನು ಈ ವರ್ಷದ ಮಾರ್ಚ್ ಅಂತ್ಯದಲ್ಲಿ ಘೋಷಿಸಲಾಗಿತ್ತು. ನ್ಯಾಷನಲ್ ಬ್ಯಾಂಕ್ ಆಫ್ ಉಕ್ರೇನ್ ಗೆ 2023 ರ ‘ಸೆಂಟ್ರಲ್ ಬ್ಯಾಂಕ್ ಆಫ್ ದಿ ಇಯರ್’ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ‘ಗವರ್ನರ್ ಆಫ್ ದಿ ಇಯರ್’ ಪ್ರಶಸ್ತಿ ಲಭಿಸಿದೆ.

ಶಕ್ತಿಕಾಂತ ದಾಸ್ (ನಿವೃತ್ತ IAS ಅಧಿಕಾರಿ) ಡಿಸೆಂಬರ್ 12, 2018 ರಂದು ಭಾರತೀಯ ರಿಸರ್ವ್ ಬ್ಯಾಂಕ್‌ನ 25 ನೇ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡರು. ಇದಕ್ಕಿಂತ ಮೊದಲು ಅವರು ಭಾರತದ 15 ನೇ ಹಣಕಾಸು ಆಯೋಗದ ಮುಖ್ಯಸ್ಥ ಮತ್ತು G20 ಶೆರ್ಪಾ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.

- Advertisement -

ತಮ್ಮ 40 ವರ್ಷಗಳ ವೃತ್ತಿಜೀವನದಲ್ಲಿ ದಾಸ್ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಹಣಕಾಸು, ತೆರಿಗೆ, ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ.

ಹಣಕಾಸು ಸಚಿವಾಲಯದಲ್ಲಿ ಅವರ ಸುದೀರ್ಘ ಅಧಿಕಾರಾವಧಿಯಲ್ಲಿ, ಅವರು ಎಂಟು ಕೇಂದ್ರ ಬಜೆಟ್‌ಗಳ ತಯಾರಿಕೆಯಲ್ಲಿ ನೇರವಾಗಿ ಸಂಬಂಧ ಹೊಂದಿದ್ದರು. ಅವರು IMF, G20, BRICS, SAARC ಮುಂತಾದ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಶಕ್ತಿಕಾಂತ ದಾಸ್ ಅವರು ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.



Join Whatsapp