NDTV ಸುದ್ದಿ ಸಂಪಾದಕ ರವೀಶ್ ಕುಮಾರ್ ದಿಢೀರ್ ರಾಜೀನಾಮೆ

Prasthutha|

►NDTVಯೊಂದಿಗಿನ 15 ವರ್ಷದ ವೃತ್ತಿ ಸೇವೆಗೆ ವಿರಾಮ

ನವದೆಹಲಿ: ಎನ್‌ಡಿಟಿವಿಯ ಜನಪ್ರಿಯ ನಿರೂಪಕ ರವೀಶ್ ಕುಮಾರ್ ಅವರು ವಾಹಿನಿಯ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.

- Advertisement -

ಎನ್‌ಡಿಟಿವಿ ಅಧ್ಯಕ್ಷೆ ಸುಪರ್ಣಾ ಸಿಂಗ್ ಅವರು ರವೀಶ್ ಅವರ ರಾಜೀನಾಮೆಯ ಕುರಿತು ಚಾನೆಲ್‌ನ ಉದ್ಯೋಗಿಗಳಿಗೆ ಇಮೇಲ್ ಮೂಲಕ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಗೌತಮ್ ಅದಾನಿ ಚಾನೆಲ್‌ ಅಧೀನವನ್ನು ವಹಿಸಿಕೊಂಡ ನಂತರ ಚಾನೆಲ್‌ನ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ಅವರ ರಾಜೀನಾಮೆಯ ಬೆನ್ನಲ್ಲೇ ರವೀಶ್ ಅವರೂ ರಾಜೀನಾಮೆ ನೀಡಿದ್ದಾರೆ.

ತನ್ನ ದಿಟ್ಟ ಪತ್ರಿಕೋದ್ಯಮದ ಕಾರಣ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದರು. 2019 ರಲ್ಲಿ ರಾಮೊನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದ ಐದನೇ ಭಾರತೀಯ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಕಾರಣರಾಗಿದ್ದಾರೆ..

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಯನ್ನು ರವೀಶ್ ಬಹಿರಂಗವಾಗಿ ಟೀಕಿಸುತ್ತಿದ್ದರು. ಧೋರಣೆಯನ್ನು ಪ್ರಶ್ನಿಸದ, ಅವಕಾಶವಾದವನ್ನು ತನ್ನದಾಗಿಸಿಕೊಳ್ಳುತ್ತಿದ್ದ ಮಾಧ್ಯಮಗಳನ್ನು ‘ಗೋಡಿ ಮೀಡಿಯಾ’ ಎಂಬ ಪದದ ಮೂಲಕ ಜನರೆಡೆಯಲ್ಲಿ ಪರಿಚಯ ಗೊಳಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ.

- Advertisement -