ಶರವೇಗದ ಬೆಲೆಯೇರಿಕೆ; ಸತತ 9 ನೇ ಬಾರಿ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ

Prasthutha|

ಹೊಸದಿಲ್ಲಿ: ದೇಶಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆ ಸತತ 10ನೇ ದಿನ ಕೂಡ ಏರಿಕೆಯಾಗಿದ್ದು,ಗುರುವಾರ ದೇಶದಲ್ಲಿ ಇಂಧನ ದರ ಪ್ರತಿ ಲೀಟರ್ ಗೆ 80 ಪೈಸೆ ಅಧಿಕವಾಗಿದೆ.

- Advertisement -

ದೆಹಲಿಯಲ್ಲಿ ಇಂದು ಪೆಟ್ರೋಲ್ ದರ ಲೀಟರ್ ಗೆ 101.81 ಮತ್ತು ಡೀಸೆಲ್ ಬೆಲೆ ಲೀಟರ್ ಗೆ 93.07 ರೂಪಾಯಿಗೆ ಹೆಚ್ಚಳವಾಗಿದೆ. ದೇಶಾದ್ಯಂತ ಹೆಚ್ಚಳವಾಗಿರುವ ಇಂಧನ ಬೆಲೆಯ ದರ ಪ್ರತಿ ರಾಜ್ಯದಿಂದ ರಾಜ್ಯಕ್ಕೆ ಸ್ಥಳೀಯ ತೆರಿಗೆ ಆಧಾರದ ಮೇಲೆ ವ್ಯತ್ಯಾಸವಾಗುತ್ತದೆ.

 ನಾಲ್ಕೂವರೆ ತಿಂಗಳ ನಂತರ ಮಾರ್ಚ್ 22ರಿಂದ ಏರಿಕೆಯಾದ ಇಂಧನ ಬೆಲೆ ಏರಿಕೆಯಲ್ಲಿ ಇದು ಸತತ 9 ಬಾರಿ ನೇ ಹೆಚ್ಚಳವಾಗಿದೆ. ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ 107.30 ರೂಪಾಯಿ ಮತ್ತು ಡೀಸೆಲ್ ಬೆಲೆ 91.27 ರೂಪಾಯಿ ಆಗಿದೆ.

- Advertisement -

ಮಂಗಳೂರಿನಲ್ಲಿ ಪೆಟ್ರೋಲ್ ಬೆಲೆ 104.81 ರೂಪಾಯಿ ಮತ್ತು ಡೀಸೆಲ್ ಬೆಲೆ 87.89 ರೂಪಾಯಿ ಆಗಿದೆ.

Join Whatsapp