ಆಸ್ಪತ್ರೆ ಐಸಿಯುನಲ್ಲೇ ಕ್ಷಯ ರೋಗಿ ಯುವತಿಯ ಅತ್ಯಾಚಾರ

Prasthutha|

ಗುರ್ಗಾಂವ್ : ದೆಹಲಿ ಸಮೀಪದ ಗುರ್ಗಾಂವ್ ಫೋರ್ಟಿಸ್ ಆಸ್ಪತ್ರೆಯಲ್ಲಿ ಕ್ಷಯರೋಗದಿಂದ ಬಳಲುತ್ತಿದ್ದ 21 ವರ್ಷದ ಯುವತಿಯ ಮೇಲೆ ಐಸಿಯುನಲ್ಲೇ ಅತ್ಯಾಚಾರ ನಡೆದ ಬಗ್ಗೆ ವರದಿಯಾಗಿದೆ. ಘಟನೆ ಕಳೆದ ವಾರ ನಡೆದಿದ್ದು, ಆರು ದಿನಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯು, ಪ್ರಜ್ಞೆ ಪಡೆದ ಬಳಿಕ, ತನ್ನ ತಂದೆಗೆ ಲಿಖಿತವಾಗಿ ಮತ್ತು ಸಂಜ್ಞೆಗಳ ಮೂಲಕ ಘಟನೆಯ ಬಗ್ಗೆ ವಿವರಿಸಿದ್ದಾಳೆ.

- Advertisement -

ಯುವತಿ ಅ.21ರಂದು ಆಸ್ಪತ್ರೆಗೆ ದಾಖಲಾಗಿದ್ದಳು. ಆಕೆಗೆ ಉಸಿರಾಟದ ಸಮಸ್ಯೆಯಿತ್ತು. ಅ.21ರಿಂದ 27ರ ನಡುವೆ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವಿಕಾಸ್ ಎಂಬಾತ ಈ ಕೃತ್ಯ ಎಸಗಿರುವ ಬಗ್ಗೆ ಶಂಕಿಸಲಾಗಿದೆ. ಆರೋಪಿಯ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Join Whatsapp