11 ವರ್ಷಗಳಲ್ಲಿ ಮಹಿಳೆಯರ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ: ‘ನಿರ್ಭಯಾ’ ತಾಯಿ

Prasthutha|

ನವದೆಹಲಿ: ನಮ್ಮ ಮಗಳು ತೀರಿಕೊಂಡು 11 ವರ್ಷಗಳಾಗುತ್ತಾ ಬರುತ್ತಿದೆ. ಈ ಸಮಯದಲ್ಲಿ ದೇಶದಲ್ಲಿ ಇದುವರೆಗೂ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ನಮಗೆ ಎಲ್ಲ ಸಹಕಾರದಿಂದ ನ್ಯಾಯ ಸಿಕ್ಕಿದೆ ಎಂದ ‘ನಿರ್ಭಯಾ’ ತಾಯಿ ಆಶಾ ದೇವಿ, ನ್ಯಾಯಾಲಯದಲ್ಲಿ ವಿಚಾರಣೆ ಬಾಕಿಯಿರುವ ಹಲವು ಪ್ರಕರಣಗಳಿಗೆ ಮುಕ್ತಿ ಸಿಗುವುದು ಯಾವಾಗ ಎಂದು ಪ್ರಶ್ನಿಸಿದ್ದಾರೆ.

- Advertisement -

ಡಿಸೆಂಬರ್​ 16, 2012ರಂದು ನಡೆದಿದ್ದ ಅರೆ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಕೆರಳಿಸಿತ್ತು. ಪ್ರಕರಣದ ಕುರಿತು ಮಾತನಾಡಿರುವ ಆಶಾ ದೇವಿ, ಕಾನೂನು ಸುವ್ಯವಸ್ಥೆ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

11 ವರ್ಷಗಳಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಕಡಿಮೆಯಾಗಿಲ್ಲ, ಹೆಚ್ಚಿದೆ. ಕಾನೂನುಗಳನ್ನು ರಚಿಸಲಾಗಿದ್ದರೂ ಏನನ್ನೂ ಮಾಡಲಾಗಿಲ್ಲ. ಕೆಲವೊಮ್ಮೆ ಏನೂ ಬದಲಾಗುವುದಿಲ್ಲ ಎಂಬ ಭಾವನೆಯಿಂದ ನಾವು ನಿರಾಶೆಗೊಳ್ಳುತ್ತೇವೆ. ಅನೇಕ ಪ್ರಕರಣಗಳು ನಮಗೂ ಬರುತ್ತವೆ ಮತ್ತು ನಾವು ಅವರಿಗೆ ನಮ್ಮ ನೈತಿಕ ಬೆಂಬಲವನ್ನು ಮಾತ್ರ ನೀಡಬಹುದಾಗಿದೆ ಎಂದು ಅವರು ಹೇಳಿದ್ದಾರೆ.

- Advertisement -

ನಮ್ಮ ಮಗಳ ವಿಷಯದಲ್ಲಿ ಇಡೀ ದೇಶವೇ ನಮ್ಮ ಬೆಂಬಲಕ್ಕೆ ನಿಂತಿತ್ತು ಮತ್ತು ಫಾಸ್ಟ್ ಟ್ರ್ಯಾಕ್ ಕೋರ್ಟ್ ನಮ್ಮ ಮಗಳಿಗೆ ನ್ಯಾಯ ದೊರಕಿಸಿಕೊಡಲು ಸಹಕಾರಿಯಾಗಿದೆ. ಅತ್ಯಾಚಾರದ ಘಟನೆಗಳು ನಡೆದಾಗ, ಸಂತ್ರಸ್ತೆಯ ಜೊತೆ ಯಾರೂ ನಿಲ್ಲುವುದಿಲ್ಲ. ನಮ್ಮ ಮಗಳ ವಿಷಯದಲ್ಲಿ ಪ್ರತಿಭಟನೆಗಳು ನಡೆದಾಗ, ಹಲವಾರು ಮಹಿಳೆಯರು ತಮ್ಮ ಮಕ್ಕಳೊಂದಿಗೆ ಅದರಲ್ಲಿ ಭಾಗವಹಿಸಿದರು

ಜನರು ಸಾಕಷ್ಟು ಹೋರಾಟ ಮಾಡಿದರು ದೇಶದಲ್ಲಿ ಏನೂ ಬದಲಾಗಿಲ್ಲ. ಒಬ್ಬ ನಿರ್ಭಯಾಳಿಗೆ ನ್ಯಾಯ ಕೊಟ್ಟರೆ ಎಲ್ಲರಿಗೂ ನ್ಯಾಯ ಸಿಗುವುದಿಲ್ಲ. ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಬೇಕಿದ್ದು, ಸಮಯಕ್ಕೆ ಸರಿಯಾಗಿ ನ್ಯಾಯ ಸಿಗಬೇಕಿದೆ ಎಂದು ನಿರ್ಭಯಾ ತಾಯಿ ಆಶಾ ದೇವಿ ಆಶಿಸಿದ್ಧಾರೆ.



Join Whatsapp